ಬೆಳಗಾವಿ : ನವೆಂಬರ್ನಲ್ಲಿ ನಡೆದ ಬಂಡವಾಳ ಸಮಾವೇಶದಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಯುಬಿ ವೆಂಕಟೇಶ್, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು. ಬಂಡವಾಳ ಹೂಡಿಕೆ ಸಮಾವೇಶದಿಂದ ಯಾವುದೇ ಅನುಕೂಲ ಆಗುತ್ತಿಲ್ಲ. ಸಮಾವೇಶ ಮಾಡಲು 75 ಕೋಟಿ ಖರ್ಚು ಮಾಡಲಾಗಿದೆ.
ಕಳೆದ ಜಿಮ್ನ ಬಂಡವಾಳದಲ್ಲಿ 14% ಮಾತ್ರ ಬಂಡವಾಳ ಬಂದಿದೆ. ಹಾಗಾದ್ರೆ ಈ ಬಂಡವಾಳ ಹೂಡಿಕೆ ಸಮಾವೇಶದ ಲಾಭವೇನು. ಸುಮ್ಮನೆ ಸಮಾವೇಶಕ್ಕೆ ಹಣ ಖರ್ಚಾಗಿದೆ ಅಷ್ಟೆ. ಬೆಂಗಳೂರು ಬಿಟ್ಟು ಹೊರಗೆ ಬಂಡವಾಳ ಹೂಡಿಕೆ ಆಗಿಲ್ಲ ಯಾಕೆ? ಕೇವಲ ಎನರ್ಜಿ ಸೆಕ್ಟರ್ಗೆ ಮಾತ್ರ ಅವಕಾಶ ಕೊಡಲಾಗಿದೆ. ಸರ್ಕಾರ ಹೇಳಿದ ಹಾಗೆ ಉದ್ಯೋಗ ಸೃಷ್ಟಿ ಆಗಲ್ಲ ಎಂದು ಕಿಡಿಕಾರಿದರು.