Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

6.5 ಕೋಟಿ ರೂ ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು!

6.5 ಕೋಟಿ ರೂ ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು!
bengaluru , ಶನಿವಾರ, 14 ಮೇ 2022 (14:33 IST)
ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಒತ್ತುವರಿ ಮಾಡಲಾಗಿದ್ದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮಾಡಲಾಗಿದೆ.
ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆದಿದ್ದು, ಸುಮಾರು 6.50 ಕೋಟಿ ರೂ. ಮೌಲ್ಯದ 4.28 ಎಕರೆ ಜಮೀನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 0.11 ವಿಸ್ತೀರ್ಣದ ಒಟ್ಟು ಎರಡು ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 55 ಲಕ್ಷ ರೂ. ಮೌಲ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ 0.06 ವಿಸ್ತೀರ್ಣದ 30 ಲಕ್ಷ ರೂ. ಹಾಗೂ ಅನೇಕಲ್ ತಾಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದ 0.05 ವಿಸ್ತೀರ್ಣದ 25 ಲಕ್ಷ ರೂ. ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ವಿಸ್ತೀರ್ಣದ ಒಟ್ಟು ಎರಡು ನಕಾಶೆ ದಾರಿ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 95 ಲಕ್ಷ ರೂ. ಮೌಲ್ಯವಾಗಿದೆ. ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದ 1-20 ವಿಸ್ತೀರ್ಣದ ರೂ.75 ಲಕ್ಷ ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದ 0-15 ವಿಸ್ತೀರ್ಣದ 20 ಲಕ್ಷ ರೂ. ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರವು ಮಾಡಲಾಗಿದೆ.
ಯಲಹಂಕ ತಾಲೂಕಿನ ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ 2.00 ವಿಸ್ತೀರ್ಣದ ಸರ್ಕಾರಿ ಗೋಮಾಳ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 380 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. 
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ನ್ಯಾನಪನಹಳ್ಳಿ ಗ್ರಾಮದ 0-00.08 ವಿಸ್ತೀರ್ಣದ ಸರ್ಕಾರಿ ಗುಂಡುತೋಪು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 2.19 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ದೊಡ್ಡತಿಮ್ಮಸಂದ್ರ ಗ್ರಾಮದ 0-19 ವಿಸ್ತೀರ್ಣದ 100.00 ಲಕ್ಷ ರೂ. ಮೌಲ್ಯದ ಹಾಗೂ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ 0-02 ವಿಸ್ತೀರ್ಣದ 15 ಲಕ್ಷ ರೂ. ಮೌಲ್ಯದ ಸರ್ಕಾರಿ ಖರಾಬು ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಕಲ್ಲುಗುಂಡು ನಾನು: ಎಚ್ಡಿಕೆಗೆ ಮುತಾಲಿಕ್‌ ತಿರುಗೇಟು