ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆಗೈದ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಗ್ಯಾಂಗ್ ಸ್ಟರ್ ನ್ನು ಪೊಲೀಸ್ ಸಿಬ್ಬಂದಿ ಹಾಗೂ ಬುಲೆಟ್ ಪ್ರೂಫ್ ಕಾರುಗಳಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ.
ಪಂಜಾಬ್ ಪೊಲೀಸರು ಕೊನೆಗೂ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೊಯಿ ಅವರನ್ನು ತಮ್ಮ ಕಸ್ಟಡಿಗೆ ಪಡೆದಿದ್ದು, ತಿಹಾರ್ ಜೈಲಿನಿಂದ ಕರೆ ತರಲು 50 ಪೊಲೀಸರು ಹಾಗೂ 2 ಬುಲೆಟ್ ಪ್ರೂಫ್ ಕಾರುಗಳು ಹಾಗೂ 12 ಇತರೆ ವಾಹನಗಳ ಜೊತೆ ಕರೆತರಲಾಗಿದೆ.
ಪಂಜಾಬ್ ಸರಕಾರ ಗ್ಯಾಂಗ್ ಸ್ಟರ್ ಭದ್ರತೆ ಬಗ್ಗೆ ಸಂಪೂರ್ಣ ಭರವಸೆ ನೀಡಿದ ನಂತರ ಅವರನ್ನು ಪೊಲೀಸ್ ವಶಕ್ಕೆ ನೀಡಲು ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು.