ನವದೆಹಲಿ : ದೆಹಲಿಯಿಂದ ಕೆಐಎಎಲ್ ವಿಮಾನ ನಿಲ್ದಾಣಕ್ಕೆ 5 ವರ್ಷದ ಮಗುವೊಂದೇ ಪ್ರಯಾಣ ಬೆಳೆಸಿದೆ ಎಂಬುದಾಗಿ ತಿಳಿದುಬಂದಿದೆ.
5 ವರ್ಷದ ಮಗು ತಂದೆತಾಯಿಯನ್ನು ಬಿಟ್ಟು ದೆಹಲಿಯಲ್ಲಿ ಅಜ್ಜಿಯ ಜತೆ ವಾಸವಾಗಿದ್ದನು. ಆದರೆ ಕೊರೊನಾ ಭೀತಿ ಹಿನ್ನಲೆಯಲ್ಲಿ ಅಜ್ಜಿಗೆ ಬರಲು ಸಾಧ್ಯವಾಗದ ಕಾರಣದಿಂದ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಒಬ್ಬನೆ ಪ್ರಯಾಣ ಬೆಳೆಸಿದ್ದು, ಇದೀಗ ದೇವನಹಳ್ಳಿಯ ಕೆಐಎಎಲ್ ನಲ್ಲಿ ತಾಯಿ ಮಡಿಲು ಸೇರಿದೆ ಎನ್ನಲಾಗಿದೆ.