ಬೆಂಗಳೂರು : ಡ್ರೈಫ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬೇಸಿಗೆ ಕಾಲದಲ್ಲಿ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ.
ಬೇಕಾಗುವ ಸಾಮಾಗ್ರಿಗಳು: ಒಣ ಖರ್ಜೂರ 5 , ಅಂಜೂರ 6, ವಾಲ್ ನಟ್ ಸ್ವಲ್ಪ, ಬಾದಾಮಿ ಸ್ವಲ್ಪ, 2 ಚಮಚ ಜೇನುತುಪ್ಪ, 1 ಕಪ್ ಹಾಲು.
ಮಾಡುವ ವಿಧಾನ : ಒಣ ಖರ್ಜೂರ 5 , ಅಂಜೂರ 6, ವಾಲ್ ನಟ್ ಸ್ವಲ್ಪ, ಬಾದಾಮಿ ಸ್ವಲ್ಪ ಇವಿಷ್ಟನ್ನು ಒಂದು ಬೌಲ್ ಗೆ ಹಾಕಿ ನೀರು ಹಾಕಿ 5 ನಿಮಿಷ ನೆನೆಸಿಡಿ. ಬಳಿಕ 1 ಮಿಕ್ಸಿ ಜಾರ್ ಗೆ ಈ ನೆನೆಸಿಟ್ಟ ಡ್ರೈಫ್ರೂಟ್ಸ್ ನ್ನು ಹಾಕಿ ಜೇನುತುಪ್ಪ, ಹಾಲು ಹಾಕಿ ರುಬ್ಬಿ 1 ಗ್ಲಾಸ್ ಗೆ ಹಾಕಿದರೆ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ರೆಡಿಯಾಗುತ್ತದೆ.