ದೆಹಲಿ: ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ವೇಳೆ ನೂರಾರು ಯಾತ್ರಿಗಳ ಜೊತೆ 60 ಕಂಟೇನರ್‌ಗಳು ಕೂಡ ಸಾಗುತ್ತಿವೆ.
150 ದಿನಗಳ ಕಾಲ ಈ ಕಂಟೇನರ್‌ಗಳೂ ಸಾಥ್ ನೀಡಲಿವೆ.
ಪಾದಯಾತ್ರೆ ವೇಳೆ ಕನಿಷ್ಠ 200 ಜನರು ಕಾಯಂ ಆಗಿ ಇರಲಿದ್ದಾರೆ. ಪ್ರತಿ ದಿನ ಯಾತ್ರೆಯ ಬಳಿಕ ಉಳಿದುಕೊಳ್ಳಲು ಇವರಿಗೆ ಹೋಟೆಲ್‌ಗಳ ಬದಲು ಕಂಟೇನರ್‌ಗಳ ವ್ಯವಸ್ಥೆ ಮಾಡಲಾಗಿದೆ.
ಕಂಟೇನರ್‌ಗಳನ್ನು ಸಣ್ಣ ಕೊಠಡಿಯ ರೂಪದಲ್ಲಿ ಸುಸಜ್ಜಿತಗೊಳಿಸಲಾಗಿದ್ದು, ಎಲ್ಲಾ 60 ಕಂಟೇನರ್‌ಗಳು ಹಾಸಿಗೆ, ಸ್ನಾನದ ಕೊಠಡಿ, ಸೋಫಾ, ಕುರ್ಚಿ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿವೆ.
ಕಂಟೇನರ್‌ಗಳಲ್ಲಿ 2, 4, 6 ಮತ್ತು ಗರಿಷ್ಠ 12 ಮಂಚಗಳನ್ನೂ ಅಳವಡಿಸಲಾಗಿದೆ. ಟೀವಿಗಳನ್ನು ಅಳವಡಿಸಲಾಗಿಲ್ಲ. ಆದರೆ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಂಟೇನರ್‌ಗಳಲ್ಲಿ ಮಾತ್ರ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.