Publish Date: Sun, 02 Oct 2022 (15:42 IST)
Updated Date: Sun, 02 Oct 2022 (16:46 IST)
ರಸ್ತೆಯಲ್ಲಿ ಸಿಕ್ಕ 45 ಸಾವಿರ ರೂಪಾಯಿ ಹಣವನ್ನು ಹಿಂತಿರುಗಿಸುವ ಮೂಲಕ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ಮಾನವೀಯತೆ ಮೆರೆದ ವ್ಯಕ್ತಿ. ಇವರು ಹೊಸಕೆರೆ ಬಳಿ ಫ್ರೆಂಡ್ಸ್ ಹೆಸರಿನಲ್ಲಿ ಡಾಬ ನಡೆಸುತ್ತಿದ್ದಾರೆ.
ಬೆಳಗ್ಗೆ ಹೊಸಕೆರೆ ಗ್ರಾಮದ ದರ್ಶನ್ ಎಂಬ ಯುವಕ ಬೈಕ್ನಲ್ಲಿ ತೆರಳುವಾಗ 45 ಸಾವಿರ ರೂಪಾಯಿ ಹಣವನ್ನು ರಸ್ತೆಯಲ್ಲಿ ಬಿಳಿಸಿಕೊಂಡು ಹೋಗಿದ್ದರು. ಅದೇ ರಸ್ತೆಯಲ್ಲಿ ಬಂದ ಶಿವಕುಮಾರ್ಗೆ ಹಣ ಸಿಕ್ಕಿತ್ತು.
ಹಣ ಸಿಕ್ಕಿದ್ದರ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್ ಹರಿಬಿಟ್ಟಿದ್ದರು. ಹಣ ಕಳೆದುಕೊಂಡವರು ನನ್ನ ನಂಬರ್ಗೆ ಕರೆ ಮಾಡಿ ನಿಮ್ಮ ಹಣ ಪಡೆದುಕೊಳ್ಳಿ ಎಂದಿದ್ದರು. ವಿಡಿಯೋ ನೋಡಿದ್ದ ದರ್ಶನ್, ಶಿವಕುಮಾರ್ಗೆ ಕರೆ ಮಾಡಿ ಮಾಹಿತಿ ಪಡೆದು, ಅವರ ಬಳಿ ಹೋಗಿ ಹಣ ಸಂಗ್ರಹಿಸಿಕೊಂಡು ಬಂದಿದ್ದಾರೆ.
ಇದೀಗ ಶಿವಕುಮಾರ್ ಮಾನವೀಯತೆ ತುಮಕೂರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.