Publish Date: Wed, 01 Mar 2023 (14:49 IST)
Updated Date: Wed, 01 Mar 2023 (14:52 IST)
ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆ ಬೆಂಗಳೂರಿನಲ್ಲಿ ಎಂದಿನಂತೆ BMTC, KSRTC ಓಡಾಟ ಮುಂದುವರೆದಿತ್ತು. ನಮ್ಮ ಮೆಟ್ರೋ ಕೂಡ ಎಂದಿನಂತೆ ಕಾರ್ಯ ನಿರ್ವಹಿಸಿತು. ಬಸ್ ಹಾಗೂ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಇನ್ನು ಸರ್ಕಾರಿ ನೌಕರರ ಮುಷ್ಕರಕ್ಕೆ 42 ಇಲಾಖೆಗಳು ಸಾಥ್ ನೀಡಿದ್ದವು. ಇಂದು BBMPಯ ಎಲ್ಲಾ ಕಚೇರಿಗಳು ಬಂದ್ ಮಾಡಲಾಗಿತ್ತು, BBMP ಕಾರ್ಯ ಚಟುವಟಿಕೆಯಲ್ಲಿ ವ್ಯತ್ಯಯ ಕಂಡು ಬಂದಿತ್ತು. ಕಂದಾಯ ಇಲಾಖೆಯ ಕಚೇರಿಗಳ ಕಾರ್ಯವೂ ಸ್ಥಗಿತಗೊಂಡಿತ್ತು.