Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಸೇರಿ ದೇಶದಲ್ಲಿವೆ ಇಂತಹ 24 ವಿವಿಗಳು!

ಕರ್ನಾಟಕ ಸೇರಿ ದೇಶದಲ್ಲಿವೆ ಇಂತಹ 24 ವಿವಿಗಳು!
bengaluru , ಮಂಗಳವಾರ, 3 ಆಗಸ್ಟ್ 2021 (17:49 IST)
ಕರ್ನಾಟಕದಲ್ಲಿ ಒಂದು ವಿಶ್ವ ವಿದ್ಯಾಲಯ ಸೇರಿದಂತೆ ದೇಶದಕಲ್ಲಿ 24 ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬಹಿರಂಗಪಡಿಸಿದೆ.
ಲೋಕಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಸದನಕ್ಕೆ ಲಿಖಿತ ಉತ್ತರ ನೀಡಿದ್ದು, ಯುಜಿಸಿ 24 ಸ್ವಯಂ ಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಇನ್ನೂ ಎರಡು ಸಂಸ್ಥೆಗಳನ್ನು ಪತ್ತೆ ಮಾಡಿದೆ. ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ವಿದ್ಯುನ್ಮಾನ ಮುದ್ರಣ ಮಾಧ್ಯಮದ ಮೂಲಕ ಪಡೆದ ದೂರುಗಳ ಆಧಾರದ ಮೇಲೆ, ಯುಜಿಸಿ 24 ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಿದೆ ಎಂದರು.
ಕರ್ನಾಟಕದ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ನಕಲಿ ಆಗಿದೆ. ದೇಶದ 24 ನಕಲಿ ವಿವಿಗಳ ಪೈಕಿ ಉತ್ತರ ಪ್ರದೇಶದಲ್ಲಿ 8 ನಕಲಿ ವಿಶ್ವವಿದ್ಯಾಲಯಗಳಿದ್ದು, ನಂ.1 ಸ್ಥಾನ ಪಡೆದಿದೆ. ಈ ಪೈಕಿ ವಾರಣಾಸಿಯ ಸಂಸ್ಕೃತ ವಿಶ್ವವಿದ್ಯಾಲಯ; ಮಹಿಳಾ ಗ್ರಾಮ ವಿದ್ಯಾಪೀಠ, ಅಲಹಾಬಾದ್; ಗಾಂಧಿ ಹಿಂದಿ ವಿದ್ಯಾಪೀಠ, ಅಲಹಾಬಾದ್; ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ; ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಅಲಿಘರ್; ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಮಥುರಾ; ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ  ವಿಶ್ವವಿದ್ಯಾಲಯ, ಪ್ರತಾಪಘರ್ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ನೋಯ್ಡಾ ಇವುಗಳನ್ನು ನಕಲಿ ವಿವಿಗಳೆಂದು ಗುರುತಿಸಲಾಗಿದೆ.
ಅಂತೆಯೇ ದೆಹಲಿಯಲ್ಲಿ ಅಂತಹ ಏಳು ನಕಲಿ ವಿಶ್ವವಿದ್ಯಾಲಯಗಳಿದ್ದು, ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್ ಸೆಂಟ್ರಿಕ್ ಜುರಿಡಿಕಲ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್,  ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್, ಮತ್ತು ಅಧ್ಯತ್ಮಿಕ್ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ) ನಕಲಿ ವಿವಿಗಳು ಎಂದು ಘೋಷಿಸಲಾಗಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತಲಾ ಎರಡು ವಿಶ್ವವಿದ್ಯಾಲಯಗಳಿದ್ದು, ಈ ಪೈಕಿ ಕೋಲ್ಕತ್ತಾದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಕೋಲ್ಕತ್ತಾದ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ಮತ್ತು ರೂರ್ಕೆಲಾದ ನವಭಾರತ್ ಶಿಕ್ಷಾ ಪರಿಷತ್ ಮತ್ತು ಉತ್ತರ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ನಕಲಿ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ 11 ಅಕ್ರಮ ಗಣಿಗಾರಿಕೆಗಳ ಗುತ್ತಿಗೆ ರದ್ದು!