Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

22/02/2022: ಇಂದಿನ ದಿನಾಂಕದ ವಿಶೇಷತೆ ತಿಳಿಯಿರಿ

22/02/2022: ಇಂದಿನ ದಿನಾಂಕದ ವಿಶೇಷತೆ ತಿಳಿಯಿರಿ
bangalore , ಮಂಗಳವಾರ, 22 ಫೆಬ್ರವರಿ 2022 (20:17 IST)
22/02/2022: ಇಂದಿನ ದಿನಾಂಕವು ಬಹಳ ವಿಶೇಷವಾದ ದಿನಾಂಕವಾಗಿದೆ. ಇಂತಹ ದಿನಾಂಕಗಳು ಬರುವುದು ಬಹಳ ಅಪರೂಪವಾಗಿದೆ. ಏಕೆಂದರೆ ಇದು ಆರಂಭದಿಂದ ಹಾಗೂ ಅಂತ್ಯದಿಂದ ಓದಿದಾಗ ಒಂದೇ ರೀತಿ ಇರುವ ದಿನಾಂಕ (palindrome-ಪಾಲಿಂಡ್ರೋಮ್‌) ಮಾತ್ರವಲ್ಲ, ಬದಲಾಗಿ ನೀವು ಕೆಳ ಮುಖವಾಗಿ ಓದಿದರೂ (ambigram) ಅದೇ ದಿನಾಂಕ ಬರಲಿದೆ.
ಈ ಅಪರೂಪದ ದಿನಾಂಕ ಇಂದು ಬಂದಿದೆ. ಜನರು ಇದನ್ನು ಅಂಕಿ 2 ರ ದಿನ ಎಂದೇ ಕರೆಯುತ್ತಾರೆ. 22 ಫೆಬ್ರವರಿ 2022 ಅನ್ನು ಸಂಖ್ಯಾತ್ಮಕವಾಗಿ 22/02/2022 ಎಂದು ಬರೆಯಲಾಗುತ್ತದೆ. ಇದನ್ನು ನಾವು ಆರಂಭದಿಂದ ಓದಿದರೂ ಅಂತ್ಯದಿಂದ ಓದಿದರೂ 22 ಫೆಬ್ರವರಿ 2022 ಎಂಬ ಅರ್ಥವೇ ಬರಲಿದೆ. ಹಾಗೆಯೇ ಕಳೆ ಮುಖವಾಗಿ ಓದಿದರೂ ಈ 22 ಫೆಬ್ರವರಿ 2022 ಎಂದೇ ಆಗಲಿದೆ.
ನಾವು ಸ್ಲ್ಯಾಷ್ (/) ಅನ್ನು ತೆಗೆದರೆ ಇಂದಿನ ದಿನಾಂಕ, 22022022 ಆಗಲಿದೆ. ಇದು ಕೇವಲ 0 ಮತ್ತು 2 ಎಂಬ ಎರಡು ಅಂಕಿಗಳನ್ನು ಮಾತ್ರ ಹೊಂದಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬಹುದು. ನಾವು ಬ್ರಿಟಿಷ್ ದಿನಾಂಕ ಸ್ವರೂಪಕ್ಕೆ (dd-mm-yyyy) ರಂತೆ ನೋಡಿದಾಗ 22022022 ಆಗುತ್ತದೆ. ಆದರೆ ನಾವು ಯುಎಸ್‌ನಲ್ಲಿ ದಿನವನ್ನು ಬರೆಯುವ ಶೈಲಿಯಲ್ಲಿ ಬರೆದಾಗ ಮಾತ್ರ (mm-dd-yyyy) ಇದರಲ್ಲಿ ಬದಲಾವಣೆ ಉಂಟಾಗುತ್ತದೆ. ಫೆಬ್ರವರಿ 22, 2022 ಅಂದರೆ 02222022 ಎಂದು ಅತ್ತಿತ್ತವಾಗಲಿದೆ.
 
ಮೊದಲ ಕೆಲವು ಶತಮಾನಗಳಲ್ಲಿ ಮಾತ್ರ ಸಂಭವಿಸುತ್ತವೆ ಈ ವಿಶೇಷ
ಪ್ರಮುಖ ವೆಬ್‌ಸೈಟ್‌ನ ಪ್ರಕಾರ, ಪೋರ್ಟ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರೊಫೆಸರ್ ಅಜೀಜ್ ಎಸ್. ಇನಾನ್, mm-dd-yyyy ಸ್ವರೂಪದಲ್ಲಿ, ಪಾಲಿಂಡ್ರೋಮ್ ದಿನಗಳನ್ನು ಮೊದಲ ಕೆಲವು ಶತಮಾನಗಳಲ್ಲಿ ಮಾತ್ರ ಸಂಭವಿಸುತ್ತವೆ ಎಂದು ಲೆಕ್ಕಹಾಕಿದ್ದಾರೆ.
ಡಾ. ಇನಾನ್‌ರರ ಪ್ರಮುಖ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ""mm-dd-yyyy ಸ್ವರೂಪದಲ್ಲಿ, ಪ್ರಸ್ತುತ 36 ಪಾಲಿಂಡ್ರೋಮ್ ದಿನಗಳಲ್ಲಿ ಮೊದಲನೆಯದು (ಜನವರಿ 1, 2001 ರಿಂದ ಡಿಸೆಂಬರ್ 31, 3000) ಅಕ್ಟೋಬರ್ 2, 2001 (10) -02-2001) ಮತ್ತು ಅಂತಹ ಕೊನೆಯ ದಿನವು ಸೆಪ್ಟೆಂಬರ್ 22, 2290 (09-22-2290) ಆಗಿರುತ್ತದೆ," ಎಂದು ಉಲ್ಲೇಖ ಮಾಡಲಾಗಿದೆ.
 
21ನೇ ಶತಮಾನದಲ್ಲಿ ಎಷ್ಟು ವಿಶೇಷ ದಿನಾಂಕಗಳು ತಿಳಿಯಿರಿ.
21ನೇ ಶತಮಾನದಲ್ಲಿ mm-dd-yyyy ಸ್ವರೂಪದಲ್ಲಿ 12 ಪಾಲಿಂಡ್ರೋಮ್ ದಿನಗಳಿವೆ. ಮೊದಲನೆಯದು ಅಕ್ಟೋಬರ್ 2, 2001 ರಂದು (10-02-2001) ಆದರೆ ಕೊನೆಯದು ಸೆಪ್ಟೆಂಬರ್ 2, 2090 ರಂದು (09-02-2090) ಬರಲಿದೆ. dd-mm-yyyy ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಂಡರೆ, ಪ್ರಸ್ತುತ ಶತಮಾನದಲ್ಲಿ 29 ಪಾಲಿಂಡ್ರೋಮ್ ದಿನಗಳಿವೆ. ಮೊದಲನೆಯದು 10 ಫೆಬ್ರವರಿ 2001 ರಂದು (10-02-2001) ಆಗಿದ್ದು, ಫೆಬ್ರವರಿ ತಿಂಗಳ ಅಪರೂಪದ ಕೊನೆಯದು ಅಧಿಕ ದಿನವಾದ 29 ಫೆಬ್ರವರಿ 2092 (29-02-2092) 21 ನೇ ಶತಮಾನದ ಕೊನೆಯ ಪಾಲಿಂಡ್ರೊಮಿಕ್ ದಿನವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನ ಕರಾಮುವಿಯ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿ ಆರಂಭ