Publish Date: Sun, 04 Jun 2023 (10:40 IST)
Updated Date: Sun, 04 Jun 2023 (10:42 IST)
ಬೆಂಗಳೂರು : ಗ್ಯಾರಂಟಿ ಪಾಲಿಟಿಕ್ಸ್ ಮುಂದುವರಿದಿದೆ. ಬಾಡಿಗೆ ಮನೆ ಇರಲಿ, ಸ್ವಂತ ಮನೆ ಇರಲಿ. ನಮ್ಮ ಮಾತು ಖಚಿತ, ವಿದ್ಯುತ್ ಉಚಿತ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತ್ರ, 200 ಯೂನಿಟ್ ಫ್ರೀ ಅಂತಾ ಹೇಳಿಲ್ಲ. 200 ಯೂನಿಟ್ ತನಕ ಎಂದಿದ್ದೇವೆ ಅಂತಾ ಸಮಜಾಯಿಷಿ ನೀಡಿದ್ದಾರೆ.
ಯಾರು ಜಾಸ್ತಿ ವಿದ್ಯುತ್ ಬಳಸ್ತಾರೋ ಅವರು ಕಟ್ತಾರೆ ಬಿಡಿ. ಮೊಸ್ರಲ್ಲಿ ಕಲ್ಲು ಹುಡುಕ್ಬೇಡಿ ಅಂತಲೂ ಜಾರ್ಜ್ ಹೇಳಿದ್ದಾರೆ. ಇನ್ನೂ ಗ್ಯಾರಂಟಿ ಯೋಜನೆಗಳ ಜಾರಿಯಾದ ಹೊತ್ತಲ್ಲಿಯೇ ಇಂಧನ ಇಲಾಖೆ ಸದ್ದಿಲ್ಲದೇ ವಿದ್ಯುತ್ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದೆ.