Publish Date: Fri, 14 Apr 2023 (19:54 IST)
Updated Date: Fri, 14 Apr 2023 (19:38 IST)
ಬಿಜೆಪಿ ಪಟ್ಟಿ ಬಿಡುಗಡೆ ನಂತರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.. ತಮ್ಮೇಶ್ ಗೌಡಗೆ ಟಿಕೆಟ್ ಒಲಿದುಬಂದಿದ್ದು, ಎ. ರವಿ ಹಾಗೂ ಮುನೀಂದ್ರ ಕುಮಾರ್ಗೆ ಟಿಕೆಟ್ ಕೈತಪ್ಪಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.. ಇನ್ನು ಬ್ಯಾಟರಾಯನಪುರದ ಬಿಜೆಪಿ ಪಾಳಯದಲ್ಲಿ 2 ಪ್ರತ್ಯೇಕ FIR ದಾಖಲಾಗಿದೆ.. ಎ ರವಿ ಹಾಗೂ ಮುನೀಂದ್ರ ಕುಮಾರ್ ಬೆಂಬಲಿಗರ ಪ್ರತಿಭಟನೆ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ.. ಇತ್ತ ತಮ್ಮೇಶ್ ಗೌಡ ಪರ ಕಾರ್ಯಕರ್ತರಿಂದ ಮಹಿಳಾ ಕಾರ್ಯದರ್ಶಿಗೆ ಬೆದರಿಕೆ ಹಾಕಿದ್ದಾರೆ.. ಕಾಂತಲಕ್ಷ್ಮಿ ಎಂಬುವರಿಗೆ ತಮ್ಮೇಶ್ಗೌಡ ಪರ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.. ಮರ್ಯಾದೆ ಕಳೆದು ಸಾರ್ವಜನಿಕವಾಗಿ ಓಡಾಡದೆ ಮಾಡುತ್ತೇವೆಂದು ಧಮ್ಕಿ ಹಾಕಿದ್ದಾರೆ.. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.