ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 185 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚೇತರಿಕೆ ಪ್ರಮಾಣ ಶೇ.98.80ರಷ್ಟಿದೆ. ಇದುವರೆಗೆ ಒಟ್ಟು 4 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. 3,380 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಕೇಸ್ಲೋಡ್ನಲ್ಲಿ ಒಟ್ಟು 22 ಪ್ರಕರಣಗಳ ಇಳಿಕೆ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.01 ಪ್ರತಿಶತವನ್ನು ಒಳಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5 ಲಕ್ಷ ಆಗಿದೆ. ಭಾರತದಲ್ಲಿ, ಮಾರ್ಚ್ 2020ರಲ್ಲಿ COVID ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಸಾವು ವರದಿಯಾಗಿದೆ.