Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆ.ಎಸ್.ಆರ್.ಟಿ.ಸಿ ಗೆ 1500 ಕೋಟಿ ರೂ. ನಷ್ಟ

ಕೆ.ಎಸ್.ಆರ್.ಟಿ.ಸಿ ಗೆ 1500 ಕೋಟಿ ರೂ. ನಷ್ಟ
ದಾವಣಗೆರೆ , ಶುಕ್ರವಾರ, 18 ಸೆಪ್ಟಂಬರ್ 2020 (17:17 IST)
ಕೊರೊನಾ ಹಿನ್ನೆಲೆಯಲ್ಲಿ ಘೊಷಣೆಯಾಗಿದ್ದ ಲಾಕ್ ಡೌನ್ ಸಂಧರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ.

1500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ತೆರವಿನ ನಂತರ ಸಂಸ್ಥೆ ಆದಾಯ ನಿರೀಕ್ಷೆ ಮಾಡದೇ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದೆ ಎಂದರು.

ಸಂಸ್ಥೆಗೆ ಆಗಿರುವ ನಷ್ಟ ತುಂಬಿಕೊಡುವ ಹಿನ್ನೆಲೆಯಲ್ಲಿ  ಸರ್ಕಾರ 1300 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಅನುದಾನವನ್ನು ಸಿಬ್ಬಂದಿ ಸಂಬಳ ಮತ್ತು ನಿರ್ವಹಣೆಗೆ ವಿನಿಯೋಗ ಮಾಡಿ ಕೊಳ್ಳಲಾಗಿದೆ ಎಂದರು.

ನಿಗಮವು ಬಹಳ ಕಷ್ಟ ಅನುಭವಿಸುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಸಂಸ್ಥೆಗೆ ಏನಾದರೂ ಒಳ್ಳೆಯದನ್ನು ಮಾಡುವ ಚಿಂತನೆ ಮಾಡಿ. ಇನ್ನಷ್ಟೂ ದಕ್ಷತೆಯಿಂದ ದುಡಿಯಬೇಕು.  ಪ್ರಯಾಣಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಇರಬೇಕು. ಸಂಸ್ಥೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಜೊತೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿ ಪರಾರಿಯಾದ ತಮಿಳು ನಟಿ