Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

14 ಲಕ್ಷ ಬಿಪಿಎಲ್ ಕಾರ್ಡ್ ಅನರ್ಹರ ಪಟ್ಟಿಗೆ: ಅರ್ಹತೆಯಿದ್ದರೂ ಕಾರ್ಡ್ ರದ್ದಾಗಿದ್ದರೆ ಹೀಗೆ ಮಾಡಿ

Ration card

Krishnaveni K

ಬೆಂಗಳೂರು , ಮಂಗಳವಾರ, 22 ಅಕ್ಟೋಬರ್ 2024 (12:24 IST)
ಬೆಂಗಳೂರು: ರಾಜ್ಯ ಆಹಾರ ಇಲಾಖೆ ಅನರ್ಹರನ್ನು ಬಿಪಿಎಲ್ ಕಾರ್ಡ್ ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಮಾಡುತ್ತಿದ್ದು 14 ಲಕ್ಷ ಬಿಪಿಎಲ್ ಕಾರ್ಡ್ ಅನರ್ಹ ಎಂದು ಗುರುತಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಒಟ್ಟು 13.87 ಲಕ್ಷ ಅನರ್ಹ ಕಾರ್ಡ್ ಗಳನ್ನು ಗುರುತಿಸಲಾಗಿದ್ದು ಈ ಪೈಕಿ ಈಗಾಗಲೇ 3.64 ಲಕ್ಷ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿರುವ ಸರ್ಕಾರ ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ನ ಪ್ರಯೋಜನ ಸಿಗುವಂತಾಗಲು ಯೋಜನೆ ರೂಪಿಸಿದೆ.

ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಅಧಿಕವಿದ್ದರೆ, ಸ್ವಂತ ವಾಣಿಜ್ಯ ವಾಹನಗಳು, 5 ಎಕರೆ ಅಥವಾ ತತ್ಸಮಾನ ನೀರಾವರಿ ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್ ಅನರ್ಹರ ಪಟ್ಟಿಗೆ ಸೇರ್ಪಡೆಯಾಗಲಿದೆ. ಹೀಗಾಗಿ ನಿಮ್ಮ ಖಾತೆ ಕೂಡಾ ಈ ವರ್ಗಕ್ಕೆ ಸೇರಿದೆಯೇ ಎಂದು ಚೆಕ್ ಮಾಡಿ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ.

ಇದಲ್ಲದೆ 6 ತಿಂಗಳವರೆಗೆ ಪಡಿತರ ಪಡೆಯದವರು, ಒಂದು ವರ್ಷದವರೆಗೆ ನೇರ ನಗದು ಸೌಲಭ್ಯ ಪಡೆಯದೇ ಇರುವವರ ಬಿಪಿಎಲ್ ಕಾರ್ಡ್ ಕೂಡಾ ರದ್ದಾಗಲಿದೆ. ಅನರ್ಹರ ಪಟ್ಟಿಯಲ್ಲಿ ಸುಮಾರು 20 ಲಕ್ಷ ಕಾರ್ಡ್ ಇರಬಹುದು ಎಂದು ಸಚಿವರು ಅಂದಾಜಿಸಿದ್ದಾರೆ. ಎಲ್ಲಾ ಅರ್ಹತೆಗಳಿದ್ದೂ ಯೋಜನೆಗಳನ್ನು ಪಡೆಯದೇ ಇರುವ ಕಾರಣಕ್ಕೆ ಕಾರ್ಡ್ ರದ್ದಾಗಿದ್ದರೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಬರ್ತಾರಾ ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಇದು