ಭಾರತ 5ಜಿ ನೆಟ್‌ವರ್ಕ್‌ಗಾಗಿ ಕಾಯುತ್ತಿದೆ. ಈ ನಡುವೆ ನಿಮಗೆ ಒಂದು ಸಿಹಿ ಸುದ್ದಿ ಇದೆ. ಹೊಸ ವರ್ಷ 2022 ರಲ್ಲಿ 5ಜಿ ನೆಟ್‌ವರ್ಕ್ ಬರಲಿದೆ. ಹೌದು ಕನಿಷ್ಠ ಕೆಲವು ಪ್ರಮುಖ ನಗರಗಳಲ್ಲಿಯಾದರೂ 5ಜಿ ನೆಟ್‌ವರ್ಕ್ ಆರಂಭ ಆಗಲಿದೆ. ಟೆಲಿಕಾಂ ಇಲಾಖೆಯ ಪ್ರಕಾರ, ಭಾರತದಲ್ಲಿ ಮುಂದಿನ ವರ್ಷ 5ಜಿ ನೆಟ್‌ವರ್ಕ್ ಸೇವೆ ಆರಂಭವಾಗಲು ಸಿದ್ಧವಾಗಿದೆ.
ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಹಾಗೂ ವೊಡಾಫೋನ್ ಐಡಿಯಾದ ಟೆಲಿಕಾಂ ಸೇವೆಗಳು ಮುಂದಿನ ವರ್ಷ 5ಜಿ ನೆಟ್‌ವರ್ಕ್ ಸೇವೆ ಆರಂಭ ಮಾಡಲು ಸಿದ್ಧವಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟೆಲಿಕಮ್ಯೂನಿಕೇಷನ್ ಇಲಾಖೆಯು, "ಈ ಮೆಟ್ರೋ ನಗರಗಳಲ್ಲಿ ಹಾಗೂ ದೊಡ್ಡ ನಗರಗಳಲ್ಲಿ ಮುಂದಿನ ವರ್ಷ 5ಜಿ ನೆಟ್‌ವರ್ಕ್ ಸೇವೆ ಆರಂಭ ಆಗಲಿದೆ," ಎಂದು ತಿಳಿಸಿದ್ದಾರೆ.
ಈ 5ಜಿ ನೆಟ್‌ವರ್ಕ್ ನಮ್ಮ ನೆಟ್‌ವರ್ಕ್ ಅನ್ನು ಇನ್ನಷ್ಟು ವೇಗಗೊಳಿಸಲಿದೆ. ಇದು ಮೂರು ಬಾಂಡ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಕಡಿಮೆ, ಮಧ್ಯಮ ಹಾಗೂ ಹೆಚ್ಚು ಫ್ರಿಕ್ವನ್ಸಿಯಲ್ಲಿ ಇದು ಕಾರ್ಯನಿರ್ವಹಣೆ ಮಾಡಲಿದೆ. ಕಡಿಮೆ ಫ್ರಿಕ್ವನ್ಸಿಯಲ್ಲಿ 100 Mbps ನೆಟ್‌ವರ್ಕ್ ಸ್ಪೀಡ್ ಲಿಮಿಟ್ ಇರಲಿದೆ. ಇನ್ನು ಹೆಚ್ಚು ಫ್ರಿಕ್ವನ್ಸಿಯಲ್ಲಿ 20 Gbps ಗೂ ವರೆಗೆ ನೆಟ್‌ವರ್ಕ್ ಸ್ಪೀಡ್ ಇರಲಿದೆ. 4G ಯಲ್ಲಿ ಹೆಚ್ಚು ಸ್ಪೀಡ್ 1Gbps ಆಗಿದೆ. ಹಾಗಾದರೆ ಯಾವೆಲ್ಲಾ ನಗರಗಳಲ್ಲಿ ಮುಂದಿನ ವರ್ಷ 5ಜಿ ನೆಟ್‌ವರ್ಕ್ ಸೇವೆ ಆರಂಭವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
"ದೆಹಲಿ, ಲಕ್ನೋ, ಚಂಡೀಗಢ"
ದೆಹಲಿ:-
ದೆಹಲಿಯಲ್ಲಿ ಭಾರ್ತಿ ಏರ್‌ಟೆಲ್ ಈಗಾಗಲೇ 5ಜಿ ನೆಟ್‌ವರ್ಕ್‌ನ ಪ್ರಯೋಗವನ್ನು ನಡೆಸಿದೆ. ಇದು ಸುಮಾರು 3,500 MHz ಬಾಂಡ್ ಇರಲಿದೆ.
ಲಕ್ನೋ: - ಇನ್ನು ಮುಂದಿನ ವರ್ಷ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿಯೂ 5ಜಿ ನೆಟ್‌ವರ್ಕ್ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಈ ನಗರದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಯೋಗ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುಂದಿನ ವರ್ಷ 5ಜಿ ನೆಟ್‌ವರ್ಕ್ ಬರುವ ಟೆಲಿಕಮ್ಯೂನಿಕೇಷನ್ ಇಲಾಖೆಯ ನಗರಗಳ ಪಟ್ಟಿಯಲ್ಲಿ ಲಕ್ನೋ ಕೂಡಾ ಇದೆ.
ಚಂಡೀಗಢ: - ಇನ್ನು ಪಂಜಾಬ್‌ನ ರಾಜಧಾನಿ ಚಂಡೀಗಢದಲ್ಲಿಯೂ ಹೊಸ ವರ್ಷದಲ್ಲಿ 5ಜಿ ನೆಟ್‌ವರ್ಕ್ ಸೇವೆ ಆರಂಭವಾಗಲಿದೆ ಎಂದು ಟೆಲಿಕಮ್ಯೂನಿಕೇಷನ್ ಇಲಾಖೆ ಹೇಳಿದೆ. ಈ ನಗರದಲ್ಲಿಯೂ ಈವರೆಗೂ ಯಾವುದೇ 5ಜಿ ನೆಟ್‌ವರ್ಕ್‌ನ ಪ್ರಯೋಗ ಮಾಡಿರುವ ಮಾಹಿತಿ ಇಲ್ಲ.
"ಗುರುಗಾಮ, ಬೆಂಗಳೂರು, ಕೋಲ್ಕತ್ತಾ"
ಗುರಗ್ರಾಮ: - ಈ ವರ್ಷದ ಜೂನ್ ತಿಂಗಳಿನಲ್ಲಿ ಭಾರ್ತಿ ಏರ್‌ಟೆಲ್ ಗುರುಗ್ರಾಮದ ನಗರದಲ್ಲಿ 5ಜಿ ನೆಟ್‌ವರ್ಕ್ ಸೇವೆಯ ಪ್ರಯೋಗವನ್ನು ಮಾಡಿದೆ. ಈ ನಗರವು ಕೂಡಾ ಹೊಸ ವರ್ಷದಲ್ಲಿ 5ಜಿ ನೆಟ್‌ವರ್ಕ್ ಸೇವೆ ಆರಂಭವಾಗುವ ಟೆಲಿಕಮ್ಯೂನಿಕೇಷನ್ ಇಲಾಖೆಯ ನಗರಗಳ ಪಟ್ಟಿಯಲ್ಲಿ ಇದೆ.
ಬೆಂಗಳೂರು: - ಈ ವರ್ಷದ ನವೆಂಬರ್‌ನಲ್ಲಿ ಏರ್‌ಟೆಲ್ ಬೆಂಗಳೂರಿನಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗವನ್ನು ಆರಂಭ ಮಾಡಿದೆ. ಬೆಂಗಳೂರಿನಲ್ಲಿ ಆಕ್ಸೆಂಚರ್, ಎಡಬ್ಯೂಎಸ್, ಸಿಸ್ಕೋ, ಎರಿಕ್ಸಾನ್, ಗೂಗಲ್ ಕ್ಲೌಡ್, ನೋಕಿಯಾ, ಟಿಸಿಎಸ್, ಅಪೊಲೋ ಆಸ್ಪತ್ರೆ, ಫ್ಲಿಫ್‌ಕಾರ್ಟ್ ಹಾಗೂ ಹಲವಾರು ಕಂಪನಿಗಳ ಸಹಯೋಗದಲ್ಲಿ ಈ ಸೇವೆ ಆರಂಭ ಮಾಡುವ ಚಿಂತನೆ ಇದೆ.
ಕೋಲ್ಕತ್ತಾ: - ಭಾರ್ತಿ ಏರ್‌ಟೆಲ್ ಭಾರತದ ಮೊದಲ 700MHz ಬಾಂಡ್‌ಗಳ 5ಜಿ ನೆಟ್‌ವರ್ಕ್ ಪ್ರಯೋಗವನ್ನು ಕೋಲ್ಕತ್ತಾದಲ್ಲಿ ಕಳೆದ ತಿಂಗಳು ಮಾಡಿದೆ. 40 ಕಿಲೋ ಮೀಟರ್ ಕವರೇಜ್ ಅನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಸಂಸ್ಥೆಯು ಹೇಳಿದೆ.
"ಮುಂಬೈ, ಜಮ್ನಗರ್, ಅಹಮದಾಬಾದ್, ಗಾಂಧಿನಗರ"
ಮುಂಬೈ: - ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಎರಡೂ ಕೂಡಾ ಮುಂಬೈನಲ್ಲಿ ಜೂನ್ ಹಾಗೂ ಜುಲೈನಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗ ಮಾಡಿದೆ. ಇನ್ನು ರಿಲಯನ್ಸ್ ಜಿಯೋ ಇದಕ್ಕಾಗಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಬಳಸಿದೆ ಎಂದು ಹೇಳಲಾಗಿದೆ. ಏರ್‌ಟೆಲ್ ಕೂಡಾ ಇಲ್ಲಿ ಪ್ರಯೋಗವನ್ನು ನಡೆಸಿದೆ.
ಜಮ್ನಗರ್: ಗುಜರಾತ್‌ನ ಜಮ್ನಗರ್‌ನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಿಲಯನ್ಸ್ ಜಿಯೋ 5ಜಿ ನೆಟ್‌ವರ್ಕ್ ಸೇವೆ ಪ್ರಯೋಗವನ್ನು ನಡೆಸಿದೆ.
ಅಹಮದಾಬಾದ್, ಗಾಂಧಿನಗರ: ಗುಜರಾತ್‌ನ ಅಜೊಲ್ ಗ್ರಾಮದಲ್ಲಿ ವೊಡಾಫೋನ್ ಇಂಡಿಯಾ 5ಜಿ ನೆಟ್‌ವರ್ಕ್ ಸೇವೆ ಪ್ರಯೋಗವನ್ನು ಮಾಡಿದೆ. ಗಾಂಧಿನಗರದ ಉನ್ನಾವೋದಿಂದ ಸುಮಾರು 17 ಕಿಲೋ ಮೀಟರ್ ದೂರದಲ್ಲಿ ಈ ಪ್ರಯೋಗವನ್ನು ನಡೆಸಲಾಗಿದೆ. ಇದಕ್ಕಾಗಿ ಸಂಸ್ಥೆಯು ನೋಕಿಯೋ ಉಪಕರಣವನ್ನು ಬಳಸಿಕೊಂಡಿದೆ.
"ಹೈದರಾಬಾದ್, ಚೆನ್ನೈ, ಪುಣೆ"
ಹೈದರಾಬಾದ್: ಜನವರಿಯಲ್ಲಿ ಹೈದರಾಬಾದ್‌ನಲ್ಲಿ 5ಜಿ ನೆಟ್‌ವರ್ಕ್ ಸೇವೆ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಏರ್‌ಟೆಲ್ ಹೇಳಿದೆ.
ಚೆನ್ನೈ: - ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ 5ಜಿ ನೆಟ್‌ವರ್ಕ್ ಸೇವೆ ಪ್ರಯೋಗ ನಡೆಸಲಾಗಿದೆ ಎಂದು ಟೆಲಿಕಮ್ಯೂನಿಕೇಷನ್ ಇಲಾಖೆ ಹೇಳಿದೆ. ಇನ್ನು ಇಲ್ಲಿ 5ಜಿ ನೆಟ್‌ವರ್ಕ್ ಸೇವೆ ನೀಡಬಹುದು ಎಂದು ಕೂಡಾ ಹೇಳಿದೆ.
ಪುಣೆ: - ಈ ವರ್ಷದ ನವೆಂಬರ್‌ನಲ್ಲಿ ವೊಡಾಫೋನ್ ಐಡಿಯಾ ಪುಣೆಯಲ್ಲಿ 5ಜಿ ನೆಟ್‌ವರ್ಕ್ ಸೇವೆ ಪ್ರಯೋಗ ಮಾಡಿದೆ.