ತಬ್ಲಿಘಿ ಬಳಿಕ ಮುಂಬೈ ಮಾರಿ ಕಲಬುರಗಿ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಒಂದೇ ದಿನ 105 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ಮಹಾರಾಷ್ಟ್ರ ಪ್ರವಾಸ ಮುಗಿಸಿಕೊಂಡು ಜಿಲ್ಲೆಯ ಸರಕಾರಿ ಕ್ವಾರಂಟೈನ್ ನಲ್ಲಿರುವ ಜನರಲ್ಲಿ 105 ಜನರಿಗೆ ಕೊರೊನಾ ವೈರಸ್ ತಗುಲಿರುವುದು ಪತ್ತೆಯಾಗಿದೆ.
ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ 510 ಪಾಸಿಟಿವ್ ಕೇಸ್ ಗಳು ದಾಖಲಾದಂತೆ ಆಗಿವೆ. ಶಂಕಿತರಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಅವರನ್ನು ಕೋವಿಡ್ – 19 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಆರಂಭಿಸಲಾಗಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಲ್ಲೇ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದಾಗಿ 7 ಜನರು ಸಾವನ್ನಪ್ಪಿದ್ದರೆ, 375 ಆಕ್ಟೀವ್ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.