ಕೊಡಗು: ಸಿಎಂ ಕುಮಾರಸ್ವಾಮಿ ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ಇತ್ತು ಹಲವು ಸಭೆ, ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಆದರೆ ಸಿಎಂ ಒಂದು ದಿನದ ಭೇಟಿಯ ಬೆಲೆ ಎಷ್ಟು ಗೊತ್ತಾ?!
ಸಿಎಂ ಒಂದು ದಿನದ ಭೇಟಿಗಾಗಿ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಸುಮಾರು 100 ಮರಗಳನ್ನು ಕಡಿದು ಹಾಕಿದೆಯಂತೆ! ಎಲ್ಲವೂ ಸಿಎಂ ಸುರಕ್ಷತೆ ದೃಷ್ಟಿಯಿಂದ ಎಂದು ಇದಕ್ಕೆ ಸಮಜಾಯಿಷಿ ಕೊಡಲಾಗಿದೆ.
ಅಪಾಯಕಾರಿ ಮರಗಳನ್ನು ಕಡಿಯುವ ಮೊದಲು ನಮಗೆ ಯಾವುದೇ ಸೂಚನೆ ಕೊಟ್ಟಿಲ್ಲ. ನಾವು ಮಳೆ, ಗಾಳಿಯಿಂದ ಮರಗಳು ಬಿದ್ದಿರಬಹುದು ಎಂದು ಅಂದುಕೊಂಡಿದ್ದೆವು ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ.
ಆದರೆ ಇದಕ್ಕೆ ಸಮಜಾಯಿಷಿ ನೀಡಿರುವ ಜಿಲ್ಲಾಧಿಕಾರಿ ನಾವು ಅಪಾಯಕಾರಿ ಟೊಂಗೆಗಳನ್ನು ಕಡಿಯಲು ಸೂಚಿಸಿದ್ದೆವಷ್ಟೇ. ಆದರೆ ನಮ್ಮ ಆದೇಶವನ್ನು ತಪ್ಪಾಗಿ ಗ್ರಹಿಸಿ ಮರಗಳನ್ನು ಕತ್ತರಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಸ್ಪಷ್ಟನೆಗಳು ಏನೇ ಇದ್ದರೂ ರಾಜ್ಯದ ಮುಖ್ಯಮಂತ್ರಿ ಭೇಟಿ ನೆಪದಲ್ಲಿ ಹಸಿರಿಗೆ ಹೆಸರಾಗಿರುವ ಕೊಡಗಿನಲ್ಲಿ ಅದೆಷ್ಟೋ ಮರಗಳಿಗೆ ಕತ್ತರಿ ಹಾಕಿದ್ದು ಎಷ್ಟು ಸರಿ?
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.