Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಮಿಂದಾರ್ ಮೈತ್ರಕೋಸರ್ಜಿಕಲ್ ಐ ಸೆಂಟರ್ ನಿಂದ 100 ಮಂದಿಗೆ ನೇತ್ರ ತಪಾಸಣೆ

ಜಮಿಂದಾರ್ ಮೈತ್ರಕೋಸರ್ಜಿಕಲ್ ಐ ಸೆಂಟರ್ ನಿಂದ 100 ಮಂದಿಗೆ ನೇತ್ರ ತಪಾಸಣೆ
bengaluru , ಗುರುವಾರ, 19 ಆಗಸ್ಟ್ 2021 (17:58 IST)
ಅತ್ಯಾಧುನಿಕ ಕಣ್ಣಿನ ಶಸ್ತ್ರ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ದೃಷ್ಟಿದೋಷಗಳಿಗೆ ಅತ್ಯಂತ ನಿಖರವಾಗಿ ಪರಿಹಾರ ಒದಗಿಸುವ ಜಮಿಂದಾರ್ ಮೈಕ್ರೋ ಸರ್ಜಿಕಲ್ ಐ ಸೆಂಟರ್ ಬೆಂಗಳೂರಿನ ಬಾಣಸವಾಡಿಯಲ್ಲಿ ತನ್ನ  3ನೇ ಕೇಂದ್ರ ಆರಂಭಿಸಿದೆ.
ಜಮಿಂದಾರ್ ಮೈಕ್ರೋ ಸರ್ಜಿಕಲ್ ಕೇಂದ್ರವನ್ನು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಬಿ. ಪದ್ಮನಾಭ ರೆಡ್ಡಿ ಶುಭಾರಂಭ ಮಾಡಿದರು. ಈ ಸಂದರ್ಭದಲ್ಲಿ  100 ECHS ಕಾರ್ಡ್ ದಾರರಿಗೆ   ಉಚಿತ ಕಣ್ಣು ಪರೀಕ್ಷೆ ಮಾಡಲಾಗಿದೆ.
ಡಾ. ಸಮೀನಾ ಎಫ್ ಜಮಿಂದಾರ್ ಅವರ ನೇತೃತ್ವದ ಈ ಆಧುನಿಕ ಕೇಂದ್ರ ಪ್ರತಿಷ್ಠಿತ ದೃಷ್ಟಿ ಆರೈಕೆ ಸಂಘಟನೆ ಎನ್.ಎ.ಬಿ.ಎಚ್ ನಿಂದ ಮಾನ್ಯತೆ ಪಡೆದಿದೆ. “ಸುರಕ್ಷತೆ  ಮತ್ತು ಗುಣಮಟ್ಟ“ ಇಲ್ಲಿನ ವಿಶೇಷತೆಯಾಗಿದೆ.  ಉತ್ಕೃಷ್ಟ ನೇತ್ರ ತಜ್ಞರ ತಂಡವನ್ನು ಇದು ಹೊಂದಿದ್ದು,  ಕ್ಯಾಟರ್ಯಾಕ್ಟ್  , ರೆಟಿನಾ, ಗ್ಲುಕೋಮಾ, ಕಾರ್ನಿಯಾ ಮತ್ತಿತರ ವಿಭಾಗಗಳಲ್ಲಿ ವಿಶೇಷ ನೈಪುಣ್ಯತೆ ಪಡೆದಿದೆ.
ಇಲ್ಲಿ ಸಮಗ್ರ ಕಣ್ಣು ಪರೀಕ್ಷೆ, ಕ್ಯಾಟರ್ಯಾಕ್ಟ್  ಸೇವೆಗಳು, ರೆಟಿನಾ ಚಿಕಿತ್ಸೆ, ಗ್ಲುಕೋಮಾ ವಿಭಾಗ, ಕಡಿಮೆ ದೃಷ್ಟಿ ಸಮಸ್ಯೆ ಇರುವವರಿಗೆ, ಮಕ್ಕಳ ಒಪಿಡಿ, ದೃಷ್ಟಿ ಥೆರಪಿ ಸೇರಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಇಲ್ಲಿ ದೊರೆಯಲಿವೆ. ಇಲ್ಲಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗ ಹೊಂದಿದ್ದು, ಸಕಲ ಸೌಲಭ್ಯಗಳು ಇಲ್ಲಿವೆ.
ಡಾ. ಸಮೀನಾ ಎಫ್. ಜಮಿಂದಾರ್ ಅವರು ನೇತ್ರತಜ್ಞರಾಗಿ 25 ವರ್ಷಗಳ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದ ತಂಡ ಅತ್ಯಂತ ಕ್ಲಿಷ್ಟಕರ ದೃಷ್ಟಿ ಸಮಸ್ಯೆಗಳನ್ನು ಸಹ ನಿವಾರಿಸಿರುವುದು ಇವರ ವೈಶಿಷ್ಟ್ಯತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು!