Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

10 ಸಾವಿರ ರೂ. ಲಂಚ ಪಡೆದಿದ್ದ ಪೊಲೀಸ್ ಠಾಣೆ ಹೆಡ್ ಕಾನ್ಸ್​ಟೇಬಲ್

10 ಸಾವಿರ ರೂ. ಲಂಚ ಪಡೆದಿದ್ದ  ಪೊಲೀಸ್ ಠಾಣೆ ಹೆಡ್ ಕಾನ್ಸ್​ಟೇಬಲ್
bangalore , ಗುರುವಾರ, 30 ಸೆಪ್ಟಂಬರ್ 2021 (21:30 IST)
ಬೆಂಗಳೂರು: ತನಿಖೆ ವೇಳೆ ವಶಕ್ಕೆ ಪಡೆದಿದ್ದ ವಾಹನವನ್ನು ಬಿಡುಗಡೆ ಮಾಡಲು 10 ಸಾವಿರ ರೂ. ಲಂಚ ಪಡೆದಿದ್ದ ಬಾಗಲಗುಂಟೆ ಪೊಲೀಸ್ ಠಾಣೆ ಹೆಡ್ ಕಾನ್ಸ್​ಟೇಬಲ್​ ಮಂಜಣ್ಣ ಎಂಬುವರಿಗೆ ನಗರದ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಪೊಲೀಸರು ಜಪ್ತಿ ಮಾಡಿದ್ದ ಬೈಕ್ ಬಿಡುಗಡೆಗೆ ಕೋರಿದ್ದರು. ಈ ವೇಳೆ ಬೈಕ್ ಮೇಲುಸ್ತುವಾರಿವಹಿಸಿದ್ದ ಹೆಡ್ ಕಾನ್ಸ್​ಟೇಬಲ್​ ಮಂಜಣ್ಣ, ವಾಹನದ ಬಿಡುಗಡೆಗೆ 20 ಸಾವಿರ ರೂ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬೈಕ್ ಮಾಲೀಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.ಎಸಿಬಿ ಪೊಲೀಸರು 2017ರ ಜುಲೈ 15ರಂದು ಕಾರ್ಯಾಚರಣೆ ನಡೆಸಿ ಮಂಜಣ್ಣ ಲಂಚ ಪಡೆಯುವ ವೇಳೆಯೇ ಬಂಧಿಸಿ, 2018ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಗರದ ವಿಶೇಷ ನ್ಯಾಯಾಲಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿ ಮಾಲ್ ಗೆ ಬೀಗ ಜಡಿದ ಬಿಬಿಎಂಪಿ