Webdunia - Bharat's app for daily news and videos

Install App

ಕರ್ನಾಟಕದಲ್ಲಿ 2 ಲಕ್ಷ ಜನಕ್ಕೆ ಕೊರೊನಾ? ಸಚಿವ ಹೇಳಿದ್ದೇನು?

Webdunia
ಶುಕ್ರವಾರ, 12 ಜೂನ್ 2020 (17:08 IST)
ಈಗ ಮಳೆಗಾಲ ಆರಂಭವಾಗಿದ್ದು, ಸಹಜವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ.

ಮಳೆಗಾಲದಲ್ಲಿ ಸಣ್ಣದಾಗಿ ಬರುವ ಜ್ವರವನ್ನು ನಿರ್ಲಕ್ಷ್ಯ ಮಾಡದೇ ತಪಾಸಣೆಗೆ ಒಳಗಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಈಗ ಕೊರೊನಾ ಸೋಂಕಿತರಲ್ಲಿ ಮೂವರು‌ ಜನ‌ ಬೆಂಗಳೂರಿನಲ್ಲಿ ‌ಸಾವನ್ನಪ್ಪಿದ್ದು ಕೊನೆ ಕ್ಷಣದಲ್ಲಿ ಅವರು ಆಸ್ಪತ್ರೆಗೆ ಬಂದರು. ಅದಕ್ಕಾಗಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಜನರು ತಕ್ಷಣ ಜ್ವರ, ನೆಗಡಿ, ಕೆಮ್ಮು ಸಣ್ಣದಾಗಿ‌ ಕಾಣಿಸಿಕೊಂಡರೂ ಅದರಲ್ಲೂ 60 ವರ್ಷ ಮೇಲ್ಪಟ್ಟವರು ತಕ್ಷಣ ಫೀವರ್ ಕ್ಲೀನಿಕ್ ಗಳಿಗೆ ಆಗಮಿಸಬೇಕು ಎಂದರು.

ಕೊರೊನಾ ಸೋಂಕಿತರಲ್ಲಿ ಶೇ. 97 ರಷ್ಟು ಜನರಲ್ಲಿ ಸೋಂಕು ಲಕ್ಷಣ ಇಲ್ಲ ಎಂದ ಅವರು, ನಾವು ಐಎಲ್ ಎ (ಇತರೆ ಕಾಯಿಲೆಗಳಿಂದ ಸೋಂಕಿಗೆ ಒಳಗಾದವರು) ಇರುವ ರೋಗಿಗಳನ್ನು  ರಕ್ಷಿಸಿಕೊಳ್ಳಬೇಕಿದೆ ಎಂದಿದ್ದಾರೆ.

ತಜ್ಞರ ಒಂದು ಅಂದಾಜಿನ‌ ಪ್ರಕಾರ ಬರುವ ಆಗಷ್ಟ್ ವೇಳೆಗೆ ನಮ್ಮ ರಾಜ್ಯದಲ್ಲಿಯೂ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ  ಸೋಂಕು‌ ಕಾಣಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅದಕ್ಕಾಗಿ‌ನಾವು ಈಗಿನಿಂದಲೇ ಅದಕ್ಕೆ ತಕ್ಕಂತೆ ಸಿದ್ಧತೆ, ವ್ಯವಸ್ಥೆ ‌ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments