Publish Date: Fri, 01 Sep 2023 (16:24 IST)
Updated Date: Fri, 01 Sep 2023 (16:45 IST)
ಸ್ಯಾಂಡಲ್ವುಡ್ ಬಾದ್ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಳೆ 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಸುದೀಪ್ ಅಬಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಕೊರೋನಾ ಹಾಗೂ ಅಪ್ಪು ಅಗಲಿಕೆಯ ಕಾರಣಗಳಿಂದ 3 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅದ್ಧೂರಿ ಹಾಗೂ ಅವಿಸ್ಮರಣೀಯವಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಇಂದು ರಾತ್ರಿ 10 ಗಂಟೆಯಿಂದ 12 ಗಂಟೆವರೆಗೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳನ್ನು ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಭೇಟಿ ಮಾಡಲಿದ್ದಾರೆ. ನಿನ್ನೆಯೇ ಸುದೀಪ್ ಪತ್ನಿ ಪ್ರಿಯಾ ಸುದೀಪ್ ವೇದಿಕೆ ತಪಾಸಣೆ ನಡೆಸಿದ್ದು, ಬೃಹತ್ ವೇದಿಕೆ ಮೇಲೆ ಕಿಚ್ಚನಿಂದ ಅಭಿಮಾನಿಗಳಿಗೆ ಹತ್ತಾರು ಸರ್ಪ್ರೈಸ್ಗಳು ಸಿಗಲಿವೆ.