Publish Date: Fri, 24 Nov 2017 (12:14 IST)
Updated Date: Fri, 24 Nov 2017 (12:35 IST)
ಚೆನ್ನೈ: ಕ್ರೇಜಿಸ್ಟಾರ್ ಅಭಿನಯದ ನೀಲಕಂಠ, ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಇಂದ್ರ ಸೇರಿದಂತೆ ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸಿಗೆ ಕಚಗುಳಿ ಇಟ್ಟ ನಟಿ ನಮಿತಾ ತಮ್ಮ ಆತ್ಮೀಯ ಗೆಳೆಯ ವೀರಾಂದ್ರ ಚೌಧರಿ ಜತೆ ಹಸೆಮಣೆ ಏರಿದ್ದಾರೆ.
ನಮಿತಾ ಅವರ ಆತ್ಮೀಯ ಗೆಳೆಯನಾಗಿರುವ ವೀರಾ ಜತೆ ಜೀವನವನ್ನು ಹಂಚಿಕೊಳುತ್ತಿರುವುದಕ್ಕೆ ನಮಿತಾ ಸಖತ್ ಖುಷಿಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಕುಟುಂಬ ವರ್ಗದವರ ನಡುವೆ ತಿರುಪತಿಯ ಇಸ್ಕಾನ್ ನಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೀರಾಂದ್ರ ಚೌಧರಿ ಅವರು ಶರ್ವಾನಿಯಲ್ಲಿ ಮಿಂಚಿದರೆ, ಇನ್ನು ಮದುಮಗಳಾಗಿ ಮಿಂಚುತ್ತಿರುವ ನಮಿತಾ ಕೇಸರಿ ಬಣ್ಣದ ರೇಷ್ಮೆ ಸೀರೆ, ಹಾಗೂ ಒಡವೆಗಳಿಂದ ಸಿಂಗಾರಗೊಂಡು ನಾಚಿಕೆಯಿಂದ ಕೆಂಪಾಗಿದ್ದರು.
ಮದುವೆಯ ಮೊದಲಿನ ಸಂಪ್ರದಾಯದಲ್ಲಿ ನೀಲಿ ಬಣ್ಣದ ಸೀರೆಯಲ್ಲಿ ನಮಿತಾ ಕಾಣಿಸಿಕೊಂಡಿದ್ದರು. ವೀರಾಂದ್ರ ಚೌಧರಿ ನೀಲಿ ಹಾಗೂ ಕಂದುಬಣ್ಣದ ಶರ್ವಾನಿ ತೊಟ್ಟಿದ್ದರು. ಇವರಿಬ್ಬರೂ ತಮ್ಮ ಸ್ನೇಹಿತ ವರ್ಗದವರಿಗಾಗಿ ಚೆನ್ನೈನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.