Publish Date: Fri, 15 Feb 2019 (09:29 IST)
Updated Date: Fri, 15 Feb 2019 (09:32 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಎಲ್ಲವೂ ಕ್ರೆಡಿಟ್ ಕಾರ್ಡ್ ಮೂಲಕ ಹಣದ ವ್ಯವಹಾರ ನಡೆಯುತ್ತಿದೆ. ಆದರೆ ಈ ಡಿಜಿಟಲ್ ತಾಂತ್ರಿಕತೆಯಿಂದ ಹಲವರು ಮೋಸ ಹೋಗಿರುವ ಪ್ರಕರಣಗಳೂ ಆಗಿವೆ.
ಇದೀಗ ನವರಸನಾಯಕ ಜಗ್ಗೇಶ್ ತಾವು ಅನುಭವಿಸಿದ ಕತೆಯನ್ನು ಹಂಚಿಕೊಂಡಿದ್ದಾರೆ. ಪೆಟ್ರೋಲ್ ಹಾಕಿಸಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡಿ ತಮಗಾದ ವಂಚನೆಯನ್ನು ಜಗ್ಗೇಶ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಒಂದು ಬಾರಿ ಪೆಟ್ರೋಲ್ ಹಾಕಿಸಿ ಕ್ರೆಡಿಟ್ ಕಾರ್ಡ್ ನಲ್ಲಿ ಹಣ ಪಾವತಿಸಿದ್ದಕ್ಕೆ ಮೂರು ಬಾರಿ ತಮ್ಮ ಖಾತೆಯಿಂದ ಹಣ ಕಡಿತವಾಗಿದೆ ಎಂದು ಜಗ್ಗೇಶ್ ವಂಚನೆಯನ್ನು ಬಹಿರಂಗಪಡಿಸಿದ್ದಾರೆ. ಆದರೆ ತಾನು ಈ ಹಣವನ್ನು ಬ್ಯಾಂಕ್ ಗೆ ದೂರು ಕೊಟ್ಟು ಮರಳಿ ಪಡೆಯುವೆ. ಆದರೆ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿಯಿಲ್ಲದ ಜನ ಸಾಮಾನ್ಯರ ಪಾಡೇನು? ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರವಾಗಿರಿ ಎಂದು ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ. 4380 ರೂ. ಗಳಂತೆ ಮೂರು ಬಾರಿ ಜಗ್ಗೇಶ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಇಂತಹ ವಂಚನೆ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು ಎಂದು ಜಗ್ಗೇಶ್ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ