Publish Date: Sun, 02 Oct 2022 (20:33 IST)
Updated Date: Sun, 02 Oct 2022 (20:47 IST)
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಂದೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿ ಅಕ್ಷ ಆಸ್ಪತ್ರೆಯಲ್ಲಿ ಅವರ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿ ಹಂಚಿಕೊಂಡಿರುವ ಧ್ರುವ ಸರ್ಜಾ, ತಾಯಿ-ಮಗು ಆರೋಗ್ಯವಾಗಿದ್ದಾರೆ. ಪತ್ನಿಗೆ ನಾರ್ಮಲ್ ಡೆಲಿವರಿ ಆಗಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ. ಶನಿವಾರ ಸಂಜೆ ಪ್ರೇರಣಾ ಅವರನ್ನು ಕೆಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಧ್ರುವ ಸರ್ಜಾ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಆಸ್ಪತ್ರೆಗೆ ಆಗಮಿಸಿದ್ದರು. ಇದೀಗ ಹೊಸ ಕುಡಿ ಆಗಮನದ ಸುದ್ದಿ ಬೆನ್ನಲ್ಲೇ ಸರ್ಜಾ ಕುಟುಂಬಸ್ಥರು ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ. 2019 ರಲ್ಲಿ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾರನ್ನು ವಿವಾಹವಾಗಿದ್ದರು. ಈ ಶುಭ ಸಮಾರಂಭದ ಬೆನ್ನಲ್ಲೇ, ಅಂದರೆ 2020ರಲ್ಲಿ ಸರ್ಜಾ ಕುಟುಂಬದಿಂದ ಚಿರಂಜೀವಿ ಸರ್ಜಾ ಅಗಲಿದ್ದರು. ಇದಾದ ಬಳಿಕ ಸರ್ಜಾ ಕುಟುಂಬದಲ್ಲಿ ಯಾವುದೇ ಮಹತ್ವದ ಶುಭ ಸಮಾರಂಭ ನಡೆಯಲಿಲ್ಲ.ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿರುವುದು ವಿಶೇಷ.