Daily Horoscope
✕

ಯಶ್19 ಟೈಟಲ್ ಘೋಷಣೆ: ಟೈಟಲ್ ಜೊತೆ ರಿಲೀಸ್ ದಿನಾಂಕವೂ ಪ್ರಕಟ

Webdunia
ಶುಕ್ರವಾರ, 8 ಡಿಸೆಂಬರ್ 2023 (10:10 IST)
Photo Courtesy: Twitter
ಬೆಂಗಳೂರು: ಕೊನೆಗೂ ಎಲ್ಲರೂ ನಿರೀಕ್ಷಿಸಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಟೈಟಲ್ ಇದೀಗ ತಾನೇ ಘೋಷಣೆಯಾಗಿದೆ.

ಯಶ್19 ಸಿನಿಮಾಗೆ ‘ಟಾಕ್ಸಿಕ್’ ಎಂದು ಟೈಟಲ್ ನೀಡಲಾಗಿದೆ. ಎಲ್ಲರ ಊಹೆಯಂತೇ ಸಿನಿಮಾವನ್ನು ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಯಶ್19 ಗೆ ಓರ್ವ ಮಹಿಳಾ ನಿರ್ದೇಶಕಿ ಎನ್ನುವುದು ಪಕ್ಕಾ ಆಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಿಸುತ್ತಿದೆ. ಚಿಕ್ಕ ಟೀಸರ್ ಮೂಲಕ ಟೈಟಲ್ ಇಡಲಾಗಿದ್ದು, 2025 ರ ಏಪ್ರಿಲ್ 10 ರಂದು ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ಯಶ್ ಘೋಷಿಸಿದ್ದಾರೆ. ಹೀಗಾಗಿ ಯಶ್ ಮುಂದಿನ ಸಿನಿಮಾ ನೋಡಲು ಇನ್ನೂ ಒಂದು ವರ್ಷಕ್ಕೂ ಅಧಿಕ ಸಮಯ ಕಾಯಬೇಕು.

ಇದು ಡ್ರಗ್ಸ್ ಮಾಫಿಯಾ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ. ಟೀಸರ್ ನೋಡಿದರೆ ಮೈನವಿರೇಳಿಸುವ ಸಾಹಸ ದೃಶ್ಯಗಳಿರುವುದು ಪಕ್ಕಾ ಎನಿಸುತ್ತದೆ. ಇದೂ ಕೂಡಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ದರ್ಶನ್ ಬೆನ್ನುನೋವು ಮತ್ತೆ ತೀವ್ರ: ಪರಪ್ಪನ ಅಗ್ರಹಾರ ಜೈಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಆರಂಭ

ಗಂಡನಿಗಾಗಿ ಕೂದಲು ಬೋಳಿಸಿದ್ರು, ಚಪ್ಪಲಿ ಕೈಯಲ್ಲಿ ಹಿಡಿದಿದ್ರು.. ಪವನ್ ಕಲ್ಯಾಣ್, ಪತ್ನಿ ವಿಚ್ಛದನ: ಹಳೇ ವಿಡಿಯೋ ವೈರಲ್

BBK13: ಮಂಜನಿಗೆ ಸಿಕ್ಕ ನ್ಯಾಯ ಬೇರೆಯವರಿಗೆ ಯಾಕಿಲ್ಲ: ಬಿಗ್ ಬಾಸ್ ವಿರುದ್ಧ ಪ್ರೇಕ್ಷಕರ ಆಕ್ರೋಶ

BBK13: ಉತ್ತಮ ಪಡೆದರೂ ತಾಂಡವ್ ರಾಮ್ ಗೆ ಇಂದು ಕ್ಲಾಸ್ ಗ್ಯಾರಂಟಿನಾ

ಮುಂದಿನ ಸುದ್ದಿ
Show comments