ಬೆಂಗಳೂರು: ಮದುವೆಯಾದ ಬಳಿಕ ಮೊದಲ ಬಾರಿಗೆ ನಟಿಸಿದ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ರಾಧಿಕಾ ಪಂಡಿತ್ ಇದ್ದಾರೆ. ಬಹಳ ದಿನಗಳ ನಂತರ ರಾಧಿಕಾ ಸಿನಿಮಾ ಆದಿಲಕ್ಷ್ಮಿ ಪುರಾಣ ರೂಪದಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಪತಿ ಯಶ್ ಕೂಡಾ ವಿಶ್ ಮಾಡಿದ್ದಾರೆ.
ಇನ್ನು, ಪತ್ನಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವಾಗಲೇ ಯಶ್ ನಾನು ಕೂಡಾ ರಾಧಿಕಾ ಅಭಿಮಾನಿ. ಅವರನ್ನು ತೆರೆ ಮೇಲೆ ನೋಡಲು ಇಷ್ಟಪಡುತ್ತೇನೆ ಎಂದಿದ್ದರು.
ಈಗ ಸಿನಿಮಾ ಬಿಡುಗಡೆಗೆ ಮೊದಲು ಯಶ್ ‘ಪ್ರತೀ ಬಾರಿ ನಿನ್ನನ್ನು ತೆರೆ ಮೇಲೆ ನೋಡುವಾಗಲೂ ಹೊಸದಾಗಿ ಲವ್ ಆಗುತ್ತದೆ. ಪ್ರತೀ ಬಾರಿ ನೀನು ನನಗೆ ಅದ್ಭುತವೆನಿಸುತ್ತಿ. ನಿನಗೆ ಮತ್ತು ನಿನ್ನ ಅದ್ಭುತ ತಂಡಕ್ಕೆ ನನ್ನ ಶುಭಾಷಯಗಳು. ನಿರೂಪ್ ನೀನು ತುಂಬಾ ಚೆನ್ನಾಗಿ ಕಾಣ್ತಿದ್ದೀಯಾ. ರಾಕ್ ಲೈನ್ ಸರ್, ಪ್ರಿಯಾ, ಪ್ರೀತಾ ನಿಮಗೆಲ್ಲಾ ನನ್ನ ಶುಭ ಹಾರೈಕೆಗಳು’ ಎಂದು ಇಡೀ ತಂಡಕ್ಕೆ ಶುಭ ಕೋರಿದ್ದಾರೆ.