ಬೆಂಗಳೂರು: ಪತಿ ಚಿರು ಸರ್ಜಾ ಸಿನಿಮಾಗೆ ಯಾವತ್ತೂ ಬೆಂಬಲವಾಗಿ ನಿಲ್ಲುವ ಪತ್ನಿ ಮೇಘನಾ ಸರ್ಜಾ ಇಂದು ಸಿಂಗ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ.
ಚಿರು ಸರ್ಜಾ, ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾಗಾಗಿ ಮೇಘನಾ ಒಂದು ಹಾಡು ಕೂಡಾ ಹಾಡಿದ್ದಾರೆ. ಹೀಗಾಗಿ ಈ ಸಿನಿಮಾ ಈ ಸೆಲೆಬ್ರಿಟಿ ದಂಪತಿ ಪಾಲಿಗೆ ವಿಶೇಷವೇ ಸರಿ.
ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಪತಿಗೆ ವಿಶ್ ಮಾಡಿರುವ ಮೇಘನಾ ‘ಆಲ್ ದಿ ಬೆಸ್ಟ್ ಬೇಬಿ. ಸಿಂಗ ಕೇವಲ ನಿನ್ನ ಕನಸಲ್ಲ. ನನ್ನದೂ, ಹಾಗೆಯೇ ನಿನ್ನ ಲಕ್ಷಾಂತರ ಅಭಿಮಾನಿಗಳದ್ದೂ ಕೂಡಾ. ಕೊನೆಗೂ ನನಗೆ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಗುಡ್ ಲಕ್’ ಎಂದು ಮೇಘನಾ ವಿಶ್ ಮಾಡಿದ್ದಾರೆ.