Publish Date: Thu, 11 Aug 2022 (08:10 IST)
Updated Date: Thu, 11 Aug 2022 (08:52 IST)
ಹೈದರಾಬಾದ್: ಲೈಗರ್ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟ ವಿಜಯ್ ದೇವರಕೊಂಡ ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಿ ಖುಷಿಪಡಿಸುತ್ತಿದ್ದಾರೆ.
ಈ ಮೊದಲು ಲೈಗರ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾದಾ ಹವಾಯಿ ಚಪ್ಪಲಿ ಹಾಕಿಕೊಂಡು ಬಂದಿದ್ದ ವಿಜಯ್ ಎಲ್ಲರ ಗಮನ ಸೆಳೆದಿದ್ದರು. ಲೈಗರ್ ಪಾತ್ರಕ್ಕೆ ತಕ್ಕಂತೆ ವಿಜಯ್ ಟ್ರೈಲರ್ ಲಾಂಚ್ ನಲ್ಲೂ ಚಪ್ಪಲಿ ಹಾಕಿಕೊಂಡಿದ್ದರು.
ಇದೀಗ ಚಿತ್ರದ ಪ್ರಚಾರಕ್ಕಾಗಿ ಊರೂರು ಸುತ್ತುವಾಗಲೂ ವಿಜಯ್ ಹವಾಯಿ ಚಪ್ಪಲಿ ಹಾಕಿಕೊಂಡೇ ತಿರುಗಾಡುತ್ತಿದ್ದಾರೆ. ಈ ಮೂಲಕ ತಮ್ಮ ಪಾತ್ರಕ್ಕೆ ಆದಷ್ಟು ಹತ್ತಿರವಿರುವಂತೆ ಪ್ರಚಾರದಲ್ಲೂ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.