ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರನಿಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.
ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ್ ರಾಜ್ ಮತ್ತು ಸರ್ಜಾ ಕುಟುಂಬ ರಾಯನ್ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ತಮ್ಮ ಮಗನಿಗೆ ರಾಯನ್ ಹೆಸರು ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ಮೇಘನಾ ಹೇಳಿಕೊಂಡಿದ್ದಾರೆ. ರಾಯನ್ ಹೆಸರನ್ನು ನಾನೇ ಸೂಚಿಸಿದೆ. ಇದು ಎರಡೂ ಕುಟುಂಬದವರಿಗೂ ಒಪ್ಪಿಗೆಯಾಯಿತು ಎಂದಿದ್ದಾರೆ. ಅಂದ ಹಾಗೆ ರಾಯನ್ ಎಂದರೆ ಯುವರಾಜ ಎಂದು ಅರ್ಥ ಎಂದು ಕುಟುಂಬದವರು ಹೇಳಿದ್ದಾರೆ.