ಬೆಂಗಳೂರು: ಚಿರು ಸರ್ಜಾ-ಮೇಘನಾ ರಾಜ್ ಪುತ್ರನಿಗೆ ಇಂದು 10 ತಿಂಗಳು ತುಂಬಿದ ಖುಷಿ ಒಂದೆಡೆಯಾದರೆ ಹೊಸ ಗೆಳೆಯ ಸಿಕ್ಕಿದ ಖುಷಿ ಇನ್ನೊಂದೆಡೆ. ಈ ಖುಷಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜ್ಯೂನಿಯರ್ ಚಿರುಗೆ ಇಂದು 10 ತಿಂಗಳು ಪೂರ್ತಿಯಾಗುತ್ತಿದ್ದು, ಈ ವಿಶೇಷ ದಿನಕ್ಕೆ ಚಿರು ಪುತ್ರನಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ ಎಂದು ಮೇಘನಾ ಬರೆದುಕೊಂಡಿದ್ದಾರೆ.
ಒಂದು ಚಿಂಪಾಂಜಿ ಬೊಂಬೆ ಜ್ಯೂನಿಯರ್ ಚಿರು ಹೊಸ ಗೆಳೆಯನಾಗಿದ್ದು, ಇದಕ್ಕೆ ಚಾಂಪ್ ಎಂದು ಹೆಸರಿಟ್ಟಿದ್ದಾರಂತೆ. ಇದು ಜ್ಯೂನಿಯರ್ ಚಿರುಗೆ ತುಂಬಾ ಇಷ್ಟವಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.