Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವರ್ತೂರ್ ಸಂತೋಷ್‌ ಹೋಲುವ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಈ ವ್ಯಕ್ತಿ ಯಾರು

Whos Is Gold Suresh, Big Boss Season 11, Colors Kannada,

Sampriya

ಬೆಂಗಳೂರು , ಭಾನುವಾರ, 29 ಸೆಪ್ಟಂಬರ್ 2024 (11:19 IST)
Photo Courtesy X
ಬಿಗ್‌ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಶುರುವಾಗಿದ್ದು, ಇದೀಗ ಮೈ ತುಂಬಾ ಗೋಲ್ಡ್ ಹಾಕಿಕೊಂಡ ವ್ಯಕ್ತಿಯೊಬ್ಬರು ಎಂಟ್ರಿಯಾಗಿದ್ದಾರೆ. ಗೋಲ್ಡ್ ಸುರೇಶ್ ಎಂದೇ ಖ್ಯಾತಿ ಗಳಿಸಿರುವ ಇವರು ಅಂದಾಜು 2ಕೋಟಿ ಮೌಲ್ಯದ ಚಿನ್ನವನ್ನು ಧರಿಸಿ ಓಡಾಡುತ್ತಾರೆ.

ಇವರ ಹಿನ್ನೆಲೆ ಹೀಗಿದೆ:

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಅವರು ಬಳಿಕ ಕ್ರಿಯೇಟಿವ್ ಇಂಟೀರಿಯರ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಇದೀಗ ಇವರ ಸಂಸ್ಥೆಯಲ್ಲಿ ಸಾಕಷ್ಟು ಮಂದಿ ಕೆಲಸಗಾರರಿದ್ದಾರೆ. ಇವರಿಗೆ ಈಚೆಗೆ ಜೀ ನ್ಯೂಸ್‌ ಯುವರತ್ನ ಅವಾರ್ಡ್ ನೀಡಿ ಗೌರವಿಸಿತ್ತು.

ಇವರು ಹೆಚ್ಚಾಗಿ ಗುರುತಿಸಿಕೊಂಡಿರುವುದೇ ತಮ್ಮ ಮೈಮೇಲಿನ ಚಿನ್ನದಿಂದಾಗಿ, ಸದಾ ಮೈಮೇಲೆ ಕೆಜಿಗಟ್ಟಲೇ ಚಿನ್ನ ಹಾಕಿಕೊಂಡು ಸುತ್ತಾಡುವ ಇವರು ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್‌ಗಳಿಂದ ಫೇಮಸ್ ಆಗಿದ್ದಾರೆ.

ಕಳೆದ ಸೀಸನ್‌ನಲ್ಲಿ ಖ್ಯಾತಿ ಗಳಿಸಿದ ವರ್ತೂರ್ ಸಂತೋಷ್ ಅವರಂತೆಯೇ ಗೋಲ್ಡ್ ಸುರೇಶ್ ಅವರ ಜೀವನ ಶೈಲಿ ಹೋಲುತ್ತಿದ್ದು, ಇವರು ಕೂಡಾ ಅವರಂತೆಯೇ ಜನರಿಗೆ ಹತ್ತಿರುವಾಗುತ್ತಾರಾ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಒಂದೇ ಪದದಲ್ಲೇ ಮಾಧ್ಯಮದವರ ಬಾಯಿ ಮುಚ್ಚಿಸಿದ ಐಶ್ವರ್ಯ ರೈ