Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷಗಳಾಗಿವೆ. ಆದರೆ ಅವರು ನಟಿಸಿದ್ದ ಕೊನೆಯ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.
ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಂಡ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ಆದರೆ ಅದರ ಡಬ್ಬಿಂಗ್ ಮಾಡಲು ಅವರಿಂದಾಗಿರಲಿಲ್ಲ. ಹೀಗಾಗಿ ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದರು. ಹಾಗೂ ಹೀಗೂ ಸಿನಿಮಾ ಕಂಪ್ಲೀಟ್ ಆಗಿತ್ತು.
ಆದರೆ ಈ ಸಿನಿಮಾವನ್ನು ಚಿತ್ರತಂಡ ಇನ್ನೂ ಬಿಡುಗಡೆಯಾಗಿಲ್ಲ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಸ್ವತಃ ಧ್ರುವ ಹೇಳಿದ್ದಾರೆ. ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ.