ಬಾಲಿವುಡ್ ಸಿನಿಮಾ ನಿರ್ಮಾಪಕರೊಬ್ಬರ ವಿರುದ್ಧ ನಟಿ ಕಂಗನಾ ರಣಾವತ್ ಭಾರೀ ಆರೋಪ ಮಾಡಿದ್ದಾರೆ.
ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಕಿರುಕುಳದ ಆರೋಪವನ್ನು ನಟಿ ಪಾಯಲ್ ಘೋಷ್ ಮಾಡಿರುವ ಬೆನ್ನಲ್ಲೇ ಕಂಗನಾ ರಣಾವತ್, ಚಿತ್ರ ನಿರ್ಮಾಪಕನಿಗೆ ಟಾಂಗ್ ನೀಡಿದ್ದಾರೆ.
ಅನುರಾಗ್ ಕಶ್ಯಪ್ ತನ್ನ ಜತೆ ಇರೋರಿಗೆ ಮೋಸ ಮಾಡಿದ್ದು, ಅವರೆಂದೂ ಏಕಪತ್ನಿತ್ವ ಪಾಲಿಸಿಲ್ಲ. ಬೇರೆ ಹೆಣ್ಣುಮಕ್ಕಳನ್ನು ಆ ಥರದ ಕಾರ್ಯಕರ್ತೆಯರಂತೆ ಸಹಜವಾಗಿ ನಡೆಸಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆ ಎಂದು ನಟಿ ಕಂಗನಾ ದೂರಿದ್ದಾರೆ.
ಇನ್ನು, ನಟಿ ಪಾಯಲ್ ಘೋಷ್ ನಿರ್ಮಾಪಕ ಅನುರಾಗ್ ವಿರುದ್ಧ ದೂರಿದ್ದು, ರೂಮಿಗೆ ಕರೆದೊಯ್ದು ತಮ್ಮ ಮೇಲೆ ಆ ಥರ ದೌರ್ಜನ್ಯ ಮಾಡಿದ್ದಾನೆ ಎಂದಿದ್ದಾರೆ.