Publish Date: Friday, 22 April 2022 (11:04 IST)
Updated Date: Friday, 22 April 2022 (09:06 IST)
ಬೆಂಗಳೂರು: ಯುವ ನಟ ವಿರಾಟ್ ಈಗ ಅದ್ಧೂರಿ ಲವ್ವರ್ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಎಪಿ ಅರ್ಜುನ್ ಜೊತೆ ಕಿಸ್ ಸಿನಿಮಾ ಮಾಡಿ ಹಿಟ್ ಆಗಿದ್ದ ವಿರಾಟ್ ಈಗ ಅದ್ಧೂರಿ ಲವ್ವರ್ ಮೂಲಕ ತೆರೆಗೆ ಬರುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕೂಡಾ ಈಗಾಗಲೇ ಬಿಡುಗಡೆಯಾಗಿತ್ತು.
ಇದೀಗ ವಿರಾಟ್ ಅದ್ಧೂರಿ ಲವ್ವರ್ ಸಿನಿಮಾಗಾಗಿ ಜಿಮ್ ನಲ್ಲಿ ಬೆವರಿಳಿಸುತ್ತಿದ್ದು, ದೇಹ ಹುರಿಗೊಳಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇನ್ನಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.