Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಸಸ್ಪೆನ್ಸ್, ಥ್ರಿಲ್ಲಿಂಗ್ ಟ್ರೈಲರ್ ಇದೀಗ ರಿಲೀಸ್ ಆಗಿದೆ.
ಟ್ರೈಲರ್ ನೋಡುತ್ತಿದ್ದರೆ ಈ ಸಿನಿಮಾವೂ ಮತ್ತೆ ಕನ್ನಡ ಸಿನಿಮಾವನ್ನು ತಿರುಗಿ ನೋಡುವಂತೆ ಮಾಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಅದ್ಭುತ ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ, ಜೊತೆಗೆ ಇಡೀ ಸಿನಿಮಾದಲ್ಲಿ ವಿಕ್ರಾಂತ್ ರೋಣನಾಗಿ ಕಿಚ್ಚನ ಅಬ್ಬರ. ಸುದೀಪ್ ಸಿನಿಮಾಗಳ ಪೈಕಿ ಇದೊಂದು ಮೈಲಿಗಲ್ಲಲಾಗಲಿದೆ ಎಂದೇ ಹೇಳಬಹುದು. ಜುಲೈ 28 ರಂದು ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಟ್ರೈಲರ್ ನೋಡಿ ಖುಷಿಪಡಿ.