ಹೈದರಾಬಾದ್ : ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದು, ಇವರ ಜೋಡಿಗೆ ಜನರ ಮೆಚ್ಚುಗೆ ಕೂಡ ಸಿಕ್ಕಿದೆ.
ಇದೀಗ ಈ ಜೋಡಿ ಎರಡು ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಎನ್ನಲಾಗಿದೆ. ಆದರೆ ಈ ಜೋಡಿ ಮತ್ತೆ ಒಂದಾಗುವುದು ಚಲನಚಿತ್ರದಲ್ಲಿ ಅಲ್ಲ. ಈ ಜೋಡಿ ಈಗ ಒಂದಾಗುತ್ತಿರುವುದು ಜನಪ್ರಿಯ ಸೋಪ್ ಬ್ರಾಂಡ್ ಸಂತೂರ್ ಗಾಗಿ ಟಿವಿ ಜಾಹೀರಾತಿನಲ್ಲಿ ನಟಿಸಲಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಂತೂರ್ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ. ಕೋವಿಡ್ ನಿಯಮ ಪಾಲಿಸಿ ಇತ್ತೀಚೆಗೆ ಈ ಜಾಹೀರಾತಿನ ಶೂಟಿಂಗ್ ಮುಂಬೈನಲ್ಲಿ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಜಾಹೀರಾತು ಟಿವಿ ಮತ್ತು ಇತರ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ.