Publish Date: Fri, 18 Nov 2022 (09:20 IST)
Updated Date: Fri, 18 Nov 2022 (09:25 IST)
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ನಿಧನದ ಬಳಿಕ ಅಂಗಾಂಗ ದಾನಕ್ಕೆ ಈಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.
ವಿಜಯ್ ಮತ್ತು ಅವರ ತಾಯಿ ಕೂಡಾ ಅಂಗಾಂಗ ದಾನಕ್ಕೆ ಸಂಕಲ್ಪ ಮಾಡಿದ್ದಾರೆ. ಅಂಗಾಂಗ ದಾನ ಮಾಡುವುದು ಶ್ರೇಷ್ಠ ಕಾರ್ಯ. ಈ ಕಾರ್ಯಕ್ಕೆ ವಿಜಯ್ ಗೆ ಅವರ ಕುಟುಂಬದವರೂ ಸಾಥ್ ನೀಡಿರುವುದು ಶ್ಲಾಘನೀಯ.
ನನ್ನ ನಿಧನದ ನಂತರ ನನ್ನ ಎಲ್ಲಾ ಅಂಗಾಂಗಳನ್ನೂ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗವಾಗಲು ಇಚ್ಛಿಸುತ್ತೇನೆ. ನಾನು ಹಾಗೂ ನನ್ನ ತಾಯಿ ಕೂಡಾ ಅಂಗಾಂಗ ದಾನಕ್ಕೆ ಸಂಕಲ್ಪ ಮಾಡಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.