Publish Date: Tue, 26 Jul 2022 (16:39 IST)
Updated Date: Tue, 26 Jul 2022 (16:41 IST)
ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಹಸಿಬಿಸಿ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ನಟ-ನಟಿಯರು ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸುತ್ತಾರೆ. ಈ ಕಾರಣಕ್ಕೇ ಹಲವು ಬಾರಿ ಈ ಶೋ ವಿವಾದಕ್ಕೊಳಗಾಗಿದ್ದಿದೆ.
ಈ ವಾರ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ಭಾಗವಹಿಸಿದ್ದಾರೆ. ಲೈಗರ್ ಸಿನಿಮಾದ ಈ ಜೋಡಿ ಚಿತ್ರದ ಪ್ರಚಾರಾರ್ಥವಾಗಿ ಒಟ್ಟಾಗಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಟೀಸರ್ ಒಂದನ್ನು ಹೊರಬಿಡಲಾಗಿದ್ದು, ಈ ಶೋನಲ್ಲಿ ವಿಜಯ್ ದೇವರಕೊಂಡಗೆ ಕೊನೆಯದಾಗಿ ನೀವು ಯಾವಾಗ ಸೆಕ್ಸ್ ಮಾಡಿದ್ದೀರಿ ಎಂದು ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ವಿಜಯ್ ಬದಲು ಅನನ್ಯಾ ಉತ್ತರಿಸುತ್ತಾರೆ. ಬಹುಶಃ ಇಂದು ಮುಂಜಾನೆ? ಎಂದು ವಿಜಯ್ ಮುಖ ನೋಡುತ್ತಾರೆ. ಅದಕ್ಕೆ ಅವರು ನಗುತ್ತಾರೆ ವಿನಃ ಇನ್ನೇನು ಉತ್ತರಿಸಲ್ಲ. ಆದರೆ ತಾವು ಈ ಹಿಂದೆ ಕಾರಿನಲ್ಲೂ ಸೆಕ್ಸ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹತಾಶನಾದಾಗ ಈ ರೀತಿ ಮಾಡಬೇಕಾಗುತ್ತದೆ ಎಂದಿದ್ದಾರೆ.