Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ: ಐಸಿಯುವಿಗೆ ದಾಖಲು

ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ: ಐಸಿಯುವಿಗೆ ದಾಖಲು
ಬೆಂಗಳೂರು , ಬುಧವಾರ, 20 ಡಿಸೆಂಬರ್ 2023 (11:05 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ ಹೇಮಾ ಚೌಧರಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ರೈನ್ ಹೆಮರೇಜ್ ಗೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹ ಚಿಕಿತ್ಸೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಸದ್ಯಕ್ಕೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೊನ್ನೆಯಷ್ಟೇ ಹಿರಿಯ ನಟಿ ಲೀಲಾವತಿ ಅವರ 11 ನೇ ದಿನದ ಕಾರ್ಯಕದಲ್ಲಿ ಹೇಮಾ ಚೌಧರಿ ಭಾಗಿಯಾಗಿದ್ದರು. ಈ ವೇಳೆ ಲೀಲಾವತಿ ಸೊಸೆ, ಕುಟುಂಬಸ್ಥರ ಜೊತೆ ಆರಾಮವಾಗಿ ಮಾತನಾಡಿಕೊಂಡಿದ್ದರು. ಆದರೆ ಈಗ ಏಕಾಏಕಿ ಈ ಪರಿಸ್ಥಿತಿಯಾಗಿದೆ.

ಹೇಮಾವತಿ ಪುತ್ರ ವಿದೇಶದಲ್ಲಿದ್ದು, ಅವರ ಆಗಮನಕ್ಕಾಗಿ ಕುಟುಂಬ ವರ್ಗದವರು ಕಾಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಫ್ಯಾನ್ಸ್ ಗಾಗಿ ಮತ್ತೊಮ್ಮೆ ಕಾಟೇರ ಪ್ರಿ ರಿಲೀಸ್ ಈವೆಂಟ್