Publish Date: Fri, 03 Dec 2021 (08:59 IST)
Updated Date: Fri, 03 Dec 2021 (09:05 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನಕ್ಕಿಳಿಯುತ್ತಿರುವ ಬಗ್ಗೆ ಹಲವು ದಿನಗಳ ಹಿಂದೆಯೇ ಸುದ್ದಿ ಬಂದಿತ್ತು. ಅದರ ಬಗ್ಗೆ ಅವರೀಗ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ.
ತಮ್ಮ ನಿರ್ದೇಶನದ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಉಪೇಂದ್ರ ಅಭಿಮಾನಿಗಳಿಗೆ ಹೇಳಿದ್ದಾರೆ. ಹಾಗಾಗಿ ಸದ್ಯದಲ್ಲೇ ಸಿನಿಮಾ ಅನೌನ್ಸ್ ಆಗುವುದು ಗ್ಯಾರಂಟಿ ಎಂದಾಗಿದೆ.
ಲಾಕ್ ಡೌನ್, ಕೊರೋನಾ ಹಾವಳಿ ಮುಗಿಯುವರೆಗೂ ನನ್ನ ನಿರ್ದೇಶನದ ಸಿನಿಮಾ ಆರಂಭಿಸಲ್ಲ ಎಂದು ಉಪೇಂದ್ರ ಈ ಮೊದಲು ಹೇಳಿದ್ದರು. ಇದೀಗ ಚಿತ್ರರಂಗ ಸಂಪೂರ್ಣ ತೆರೆಯಲು ಅವಕಾಶ ಸಿಕ್ಕಿದ್ದು, ಚಿತ್ರರಂಗ ಸಹಜ ಸ್ಥಿತಿಗೆ ಬರುತ್ತಿದೆ. ಇದರ ನಡುವೆ ಉಪೇಂದ್ರ ಕಡೆಯಿಂದ ಸಿಹಿ ಸುದ್ದಿ ಬಂದಿದೆ.