Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೌರತ್ವ ತಿದ್ದುಪಡಿ ಪ್ರತಿಭಟನೆಗೆ ತನ್ನದೇ ವ್ಯಾಖ್ಯಾನ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ

ಪೌರತ್ವ ತಿದ್ದುಪಡಿ ಪ್ರತಿಭಟನೆಗೆ ತನ್ನದೇ ವ್ಯಾಖ್ಯಾನ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ
ಬೆಂಗಳೂರು , ಬುಧವಾರ, 18 ಡಿಸೆಂಬರ್ 2019 (09:12 IST)
ಬೆಂಗಳೂರು: ಪೌರತ್ವ ತಿದ್ದುಪಡಿ ಖಾಯಿದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದಕ್ಕೆ ದೇಶದಲ್ಲಿ ಪ್ರತಿಭಟನೆಯ ಕಾವೇರುತ್ತಿದ್ದರೆ, ಇತ್ತ ಪ್ರಜಾಕೀಯ ಸಂಸ್ಥಾಪಕ, ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ರೀತಿಯಲ್ಲಿ ಇದಕ್ಕೆ ವ್ಯಾಖ‍್ಯಾನ ನೀಡಿದ್ದಾರೆ.


ಮೊನ್ನೆಯಷ್ಟೇ ಹೈದರಾಬಾದ್ ಎನ್ ಕೌಂಟರ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಉಪೇಂದ್ರ ಇಂದು ಪೌರತ್ವ ತಿದ್ದುಪಡಿ ಬಗ್ಗೆ ಪರೋಕ್ಷವಾಗಿ ರಾಜಕೀಯ ಪಕ್ಷಗಳಿಗೆ ಛಾಟಿ ಬೀಸಿದ್ದಾರೆ.

‘ಒಂದು ಪಕ್ಷಕಕ್ಕೆ ಒಂದು ಧರ್ಮ ಓಟ್ ಬ್ಯಾಂಕ್, ಇನ್ನೊಂದು ಪಕ್ಷಕ್ಕೆ ಇನ್ನೊಂದು ಧರ್ಮ ಓಟ್ ಬ್ಯಾಂಕ್. ಈ 20% ರಾಜರ ಗಲಾಟೆಯಲ್ಲಿ 80% ಜನ ಶಿಕ್ಷಣ, ಆರೋಗ್ಯ, ಉದ್ಯೋಗ ಇವುಗಳನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುವ ವಿಚಾರ ಮಾಡಲೇ ಇಲ್ಲ. ಯಾಕೆಂದರೆ ನಮಗೆ ವಿವೇಚನೆಗಿಂತ ಆವೇಶವೇ ಮುಖ್ಯ. ವಿಚಾರಗಳು ಬೋರಿಂಗ್. ಆವೇಶ ಥ್ರಿಲ್ಲಿಂಗ್’ ಎಂದು ಉಪೇಂದ್ರ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ಮತ್ತೊಂದು ಸಂದೇಶ ಬರೆದುಕೊಂಡಿದ್ದು, ಸಿಎಎಯನ್ನು ಗಂಭೀರವಾಗಿ ಪರಿಗಣಿಸದಿರಿ. ಇದು ಇನ್ನು ಒಂದು ವಾರ ಜನರಿಗೆ, ಸಾಮಾಜಿಕ ಜಾಲತಾಣಗಳಿಗೆ, ಮಾಧ‍್ಯಮಗಳಿಗೆ ಆಹಾರ ಹಾಹಾಕಾರ ಸಿಕ್ಕಾಯ್ತು. ಹೊಟ್ಟೆಗೆ ಹಿಟ್ಟು ಇಲ್ದೇ ಇದ್ರೂ ಜುಟ್ಟಿಗೆ ಮಲ್ಲಿಗೆ ಹೂ ಇಡೋ ಕೆಲಸ ಸಿಕ್ತು. ಶಬಾಸ್ ರಾಜಕೀಯ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ಭಾಷೆಯಲ್ಲಿ ಬೇರೆ ಬೇರೆ ದಿನ ಬಿಡುಗಡೆಯಾಗಲಿದೆ ಅವನೇ ಶ್ರೀಮನ್ನಾರಾಯಣ