Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ನಂತರ ನಿರ್ದೇಶನಕ್ಕೆ ಮರಳುತ್ತಿರುವ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ.
ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿರುವ ಉಪೇಂದ್ರ ಚಿತ್ರದ ಟೈಟಲ್ ಯುಐ ಎಂದು ರಿವೀಲ್ ಮಾಡಿದ್ದಾರೆ. ಹಣೆಗೆ ಯುಐ ಮಾದರಿಯ ತಿಲಕವನ್ನಿಟ್ಟುಕೊಂಡು ಉಪೇಂದ್ರ ಸೇರಿದಂತೆ ಇಡೀ ಚಿತ್ರತಂಡ ಪೂಜೆಯಲ್ಲಿ ಭಾಗಿಯಾಗಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆ. ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಜನ ಬುದ್ಧಿವಂತರು ಎಲ್ಲಾ ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ ಉಪೇಂದ್ರ.