Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನಟ ದರ್ಶನ್ ವಿರುದ್ಧ ನಡೆದಿದೆ ಎನ್ನಲಾದ 25 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿ ಅರುಣಾಕುಮಾರಿ ತಮ್ಮ ಹೆಸರನ್ನು ಪದೇ ಪದೇ ಹೇಳುತ್ತಿರುವುದರ ಮಧ‍್ಯೆ ನಿರ್ಮಾಪಕ ಉಮಾಪತಿ ಗೌಡ ಈಗ ದೇವರ ಮೊರೆ ಹೋಗಿದ್ದಾರೆ.
ವಂಚನೆ ಪ್ರಕರಣದಿಂದಾಗಿ ದರ್ಶನ್ ಮತ್ತು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಡುವಿನ ಸ್ನೇಹದ ಮಧ್ಯೆ ಬಿರಕುಂಟಾಗಿದೆ. ಇಬ್ಬರೂ ಕೂತು ಮಾತುಕತೆ ನಡೆಸಿ ತಮ್ಮ ನಡುವಿನ ವೈಮನಸ್ಯ ತಿಳಿಯಾಗಿಸಿದ್ದರೂ, ಕಾನೂನು ಪ್ರಕಾರ ಪ್ರಕರಣದ ತನಿಖೆ ಮುಂದುವರಿಯಲಿದೆ.
ಇದರ ನಡುವೆ ಇಂದು ಉಮಾಪತಿ ಗೌಡ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ತಮಗೆ ಎದುರಾದ ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ.