Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೈಸೂರು: ಮಂಡ್ಯ ರಾಜಕೀಯದಲ್ಲಿ ಸದ್ಯಕ್ಕೆ ಅಕ್ರಮ ಗಣಿಗಾರಿಕೆ ವಿಚಾರವಾಗಿ ನಡೆಯುತ್ತಿರುವ ಮಾತಿನ ಜಟಾಪಟಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ವಂಚನೆ ಪ್ರಕರಣಕ್ಕೂ ಪರಸ್ಪರ ಸಂಬಂಧವಿದೆಯೇ?
ನಿರ್ಮಾಪಕ ಉಮಾಪತಿ ಗೌಡ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆ ನೋಡಿದರೆ ಈ ಅನುಮಾನ ಕಾಡುತ್ತದೆ. ಸುದ್ದಿಗೋಷ್ಠಿಯ ಕೊನೆಯಲ್ಲಿ ಉಮಾಪತಿ ಗೌಡ ದರ್ಶನ್ ನನಗೆ ಹೇಳಿರುವ ವಿಚಾರಗಳನ್ನು ಬಹಿರಂಗಪಡಿಸಿದರೆ ಮಂಡ್ಯದಲ್ಲಿ ಈಗ ನಡೆಯುತ್ತಿರುವ ಸುದ್ದಿಗಿಂತ ಜೋರಾಗಿ ಸ್ಪೋಟವಾಗುತ್ತದೆ ಎಂದಿದ್ದಾರೆ.
ಹೀಗಾಗಿ ಈಗ ನಡೆಯುತ್ತಿರುವ ರಾಜಕೀಯ ಗುದ್ದಾಟಗಳಿಗೂ ಸುಮಲತಾ ಪರ ಪ್ರಚಾರ ಮಾಡಿದ್ದ ನಟ ದರ್ಶನ್ ಗೆ ವಂಚನೆ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ಅನುಮಾನ ಮೂಡಿದೆ.