Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿ ಚಾರ್ಮಿಯನ್ನು ಮದುವೆಯಾಗಲು ಒಪ್ಪಿದ ತ್ರಿಷಾ ಕೃಷ್ಣನ್! ಹೊಸ ವಿವಾದದಲ್ಲಿ ನಟಿಮಣಿಯರು

ನಟಿ ಚಾರ್ಮಿಯನ್ನು ಮದುವೆಯಾಗಲು ಒಪ್ಪಿದ ತ್ರಿಷಾ ಕೃಷ್ಣನ್! ಹೊಸ ವಿವಾದದಲ್ಲಿ ನಟಿಮಣಿಯರು
ಹೈದರಾಬಾದ್ , ಸೋಮವಾರ, 6 ಮೇ 2019 (07:32 IST)
ಹೈದರಾಬಾದ್: ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ತಾರೆಯಾಗಿರುವ ತ್ರಿಷಾ ಕೃಷ್ಣನ್ ಈ ಟ್ವೀಟ್ ಮಾಡಿರುವುದು ತಮಾಷೆಗಾಗಿಯೋ ಗಂಭೀರವಾಗಿಯೋ ಗೊತ್ತಿಲ್ಲ. ಆದರೆ ನಟಿ ಚಾರ್ಮಿಯೊಂದಿಗೆ ಅವರು ಮಾಡಿರುವ ಟ್ವೀಟ್ ಒಂದು ಭಾರೀ ಕೋಲಾಹಲವೆಬ್ಬಿಸಿದೆ.


ಚಾರ್ಮಿ ಕೌರ್ , ತ್ರಿಷಾ ಕೃಷ್ಣನ್ ಜತೆಗೆ ತಬ್ಬಿಕೊಂಡು ಮುತ್ತಿಕ್ಕುತ್ತಿರುವ ಫೋಟೋ ಪ್ರಕಟಿಸಿ ‘ಐ ಲವ್ ಯೂ ಬೇಬಿ. ನನ್ನ ಪ್ರಪೋಸಲ್ ಗೆ ನಿನ್ನ ಒಪ್ಪಿಗೆಗಾಗಿ ಮಂಡಿಯೂರಿ ಕಾಯುತ್ತಿದ್ದೇನೆ. ನಿನಗೆ ಗೊತ್ತು ಈಗ ಇದು ಕಾನೂನು ಪ್ರಕಾರವೂ ನಿಷಿದ್ಧವೇನಲ್ಲ. ನಾವು ಮದುವೆಯಾಗೋಣ’ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಇದಕ್ಕೆ ತ್ರಿಷಾ ನೀಡಿರುವ ಒಪ್ಪಿಗೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ‘ಥ್ಯಾಂಕ್ಯೂ ಮತ್ತು ನಿನಗೆ ನಾನು ಈಗಾಗಲೇ ಒಪ್ಪಿಗೆ ನೀಡಿದ್ದೇನೆ’ ಎಂದು ತ್ರಿಷಾ ಪ್ರತಿಕ್ರಿಯಿಸಿದ್ದಾರೆ. ತ್ರಿಷಾ ಈ ರೀತಿ ಉತ್ತರಿಸುತ್ತಿದ್ದಂತೇ ನಿಜವಾಗಿಯೂ ಈ ಸುದ್ದಿ ನಿಜವೇ ಅಥವಾ ಈ ಇಬ್ಬರು ಸುಮ್ಮನೇ ಗಾಸಿಪ್ ಹುಟ್ಟುಹಾಕಿದ್ದಾರಾ ಎಂದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಜತೆ ಕಿಚ್ಚ ಸುದೀಪ್ ಶೂಟಿಂಗ್ ಶುರು: ಕಾಲೆಳೆದ ರಕ್ಷಿತಾ ಪ್ರೇಮ್