ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾವೊಂದು ಬಿಡುಗಡೆಯಾಗುವುದಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿತ್ತು. ಇದೀಗ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸರದಿ.
ಮಮತಾ ಬ್ಯಾನರ್ಜಿ ಜೀವನಾಧಾರಿತ ಸಿನಿಮಾ ಟ್ರೈಲರ್ ಇದೀಗ ಕೆಲವು ವೆಬ್ ಸೈಟ್ ಗಳಲ್ಲಿ ಬಿಡುಗಡೆಯಾಗಿದ್ದು, ಅದಕ್ಕೆ ಚುನಾವಣಾ ಆಯೋಗ ಕತ್ತರಿ ಹಾಕಿದೆ.
ಮೋದಿ ಸಿನಿಮಾ ಚುನಾವಣೆ ಮುಗಿದ ಬಳಿಕ ಬಿಡುಗಡೆ ಮಾಡಲು ಚುನಾವಣಾ ಆಯೋಗ ಸೂಚಿಸಿತ್ತು. ಇದೀಗ ‘ಭಗಿನಿ’ ಎನ್ನುವ ಮಮತಾ ಬ್ಯಾನರ್ಜಿ ಸಿನಿಮಾದ ಟ್ರೈಲರ್ ಗಳನ್ನು ಮೂರು ವೆಬ್ ಸೈಟ್ ನಿಂದ ಕಿತ್ತು ಹಾಕಲಾಗಿದೆ. ಇದು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಆಯೋಗ ನಿಷೇಧ ಹೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ