ಮುಂಬೈ: ರಶ್ಮಿಕಾ ಮಂದಣ್ಣ ಮತ್ತು ಟೈಗರ್ ಶ್ರಾಫ್ ಜೊತೆಯಾಗಿ ಬಾಲಿವುಡ್ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು.
ಈ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಈಗ ಈ ಸಿನಿಮಾವನ್ನು ಕೈಗೆತ್ತಿಕೊಳ್ಳದಿರಲು ಕರಣ್ ಜೋಹರ್ ತೀರ್ಮಾನಿಸಿದ್ದಾರೆ ಎಂಬ ಸುದ್ದಿಯಿದೆ.
ಈ ಸಿನಿಮಾಗೆ ಉದ್ದೇಶಿಸಲಾದ ಬಜೆಟ್ ತೀರಾ ಹೆಚ್ಚಾಯಿತು ಎಂಬ ಕಾರಣಕ್ಕೆ ಕರಣ್ ಈ ಪ್ರಾಜೆಕ್ಟ್ ಮಾಡದೇ ಇರಲು ತೀರ್ಮಾನಿಸಿದ್ದಾರಂತೆ. ಹೀಗಾಗಿ ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನಲಾಗಿದೆ.