Webdunia - Bharat's app for daily news and videos

Install App

ಬರೋಬ್ಬರಿ 4 ಕೋಟಿಯ ಸ್ಪೋರ್ಟ್ಸ್‌ ಕಾರು ಖರೀದಿಸಿದ ಟಾಲಿವುಡ್‌ ನಟ ನಾಗಚೈತನ್ಯ

sampriya
ಬುಧವಾರ, 22 ಮೇ 2024 (14:31 IST)
Photo By Instagram
ಹೈದರಾಬಾದ್‌: ಟಾಲಿವುಡ್‌ನ ಖ್ಯಾತ ನಟ ನಾಗಚೈತನ್ಯ ಬರೋಬ್ಬರಿ ₹4 ಕೋಟಿ ಮೌಲ್ಯದ ಸ್ಫೋರ್ಟ್‌ ಕಾರನ್ನು ಖರೀದಿ ಮಾಡಿದ್ದಾರೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ಅವರ ಬಳಿ ಹಲವು ದುಬಾರಿ ಕಾರುಗಳು ಇವೆ.

ತೆಲುಗು ನಟ ನಾಗ ಚೈತನ್ಯ ಅವರು ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್​ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಫೋರ್ಷಾ ಈ ಕಾರಿನ ಎಕ್ಸ್​ ಶೋರೂಂ ಬೆಲೆ ₹ 3.51 ಕೋಟಿ. ಆನ್​ರೋಡ್ ಬೆಲೆ ₹ 4 ಕೋಟಿ ರೂಪಾಯಿ ದಾಟಲಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್, ಪ್ಯಾಡಲ್​ ಶಿಫ್ಟ್​ ಸ್ಪೋರ್ಟ್​​ ಮೋಡ್​ ಟ್ರಾನ್ಸ್​ಮೀಷನ್​ನಲ್ಲಿ ಲಭ್ಯವಿದೆ. ಈ ಕಾರು ಪ್ರತಿ ಲೀಟರ್​ಗೆ 7.4 ಕಿಮೀ ಮೈಲೇಜ್ ನೀಡಲಿದೆ.

ಈ  ಕಾರಿನ ಟಾಪ್​ ಸ್ಪೀಡ್ ಗಂಟೆಗೆ 296 ಕಿಲೋ ಮೀಟರ್‌ ಸಾಮರ್ಥ್ಯವಿದೆ. ಜೀರೋದಿಂದ 100 ಕಿಮೀ ಸ್ಪೀಡ್​ನ ಕೇವಲ 3.2 ಸೆಕೆಂಡ್​ನಲ್ಲಿ ತಲುಪಲಿದೆ. 3996 ಸಿಸಿ, 6 ಸಿಲಿಂಡರ್ ಇಂಜಿನ್ ಇದರಲ್ಲಿದ್ದು, ಪೆಟ್ರೋಲ್ ವೇರಿಯಂಟ್​ನಲ್ಲಿ ಕಾರು ಲಭ್ಯವಿದೆ.

ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರಿನಲ್ಲಿ ಏಳು ಏರ್​ ಬ್ಯಾಗ್ ಇದೆ. ಬೆಳ್ಳಿ ಬಣ್ಣದ ಕಾರನ್ನು ನಾಗ ಚೈತನ್ಯ ಖರೀದಿ ಮಾಡಿದ್ದಾರೆ. ನಾಗಚೈತನ್ಯ ಅವರು ಶೂಟಿಂಗ್​ನಿಂದ ಬಿಡುವು ಪಡೆದಾಗಲೆಲ್ಲ ಕಾರಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ.  ಇದೀಗ ಅವರ ಕಾರಿನ ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments