Publish Date: Mon, 20 Dec 2021 (11:33 IST)
Updated Date: Mon, 20 Dec 2021 (09:02 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಈಗ ಅವರಿಲ್ಲದ ನೋವು ಕಾಡುತ್ತಲೇ ಇದೆ. ಆದರೆ ಅವರನ್ನು ಕೊನೆ ಬಾರಿ ತೆರೆ ಮೇಲೆ ನೋಡಲು ಮೂರು ಅವಕಾಶಗಳಿವೆ.
ಸಾವಿಗೂ ಮುನ್ನ ಪುನೀತ್ ನಟಿಸಿದ್ದ ಲಕ್ಕಿ ಮ್ಯಾನ್, ಜೇಮ್ಸ್ ಮತ್ತು ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯಾಗಬೇಕಿದೆ. ಈ ಪೈಕಿ ಮೊದಲು ಯಾವುದು ಪುನೀತ್ ಅಭಿಮಾನಿಗಳ ಎದುರು ಬರಬಹುದು ಎಂಬ ಕುತೂಹಲವಿದೆ.
ಈ ಪೈಕಿ ಗಂಧದ ಗುಡಿ ಮುಂದಿನ ವರ್ಷ ತೆರೆ ಕಾಣಲಿದೆ ಎಂದು ಈಗಾಗಲೇ ಘೋಷಣೆಯಾಗಿದೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಪುನೀತ್-ಪ್ರಭುದೇವ ಜೊತೆ ಕೇವಲ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಹಾಡಿನಲ್ಲಿ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಹೆಜ್ಜೆ ಹಾಕಿರುವುದನ್ನು ನೋಡುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯಕ್ಕೆ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು, ಜೇಮ್ಸ್ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಪುನೀತ್ ಜನ್ಮ ದಿನದ ವೇಳೆ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.